Published - Tue, 03 Oct 2023
•••••••••••••••••••••••••••••••••••••••
ಅಲಾರಾಮ್ ಇಟ್ಟು ಏಳುವುದಲ್ಲ; ಮಲಗುವುದು ಆರೋಗ್ಯಕರ....!!!
ಅಚ್ಚರಿಯೇ? ಆದರೆ, ಇದೊಂದು ಆಯುರ್ ವೈದ್ಯಕೀಯ ಸತ್ಯ ಮಾಹಿತಿ.
1) ನಮ್ಮನ್ನು ಎಚ್ಚರಿಸಲು ಇರುವ ಸಾಧನವೇ ಅಲಾರಾಮ್, ಆದರೆ ಅದು ನಿದ್ದೆಯಿಂದ ಎಚ್ಚರಿಸಲು ಎಂದಿಗೂ ಅಲ್ಲ....!
2) ಅಪೂರ್ಣ ನಿದ್ದೆಯಿಂದ ಎಚ್ಚರಿಸಲು ಅಲಾರಾಮ್ ಬಳಸಿದರೆ, ಮೆದುಳಿಗೆ ಶಾಕ್ ಆಗುತ್ತದೆ, ಮೆದುಳಿನ ಅನೇಕ ನರಗಳು ಶಾಶ್ವತವಾಗಿ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ...
3) ಬೇಗ ಏಳುವುದು ಖಂಡಿತಾ ಆರೋಗ್ಯಕರ, ಆದರೆ ನೆನಪಿಡಿ, ಅಪೂರ್ಣ ನಿದ್ದೆಯಿಂದ ಏಳುವುದು ಮಹಾ ಹಾನಿಕರ.
4) ಪೂರ್ಣ ನಿದ್ದೆ ಆದ ವ್ಯಕ್ತಿಯನ್ನು ಎಚ್ಚರಿಸಲು ಅಲಾರಾಮ್ ಬೇಕಿಲ್ಲ, ಅದೊಂದು ಸಹಜ ಪ್ರಕ್ರಿಯೆ.
5) ನಿದ್ದೆಯ ಸಮಯವನ್ನು ಮೀರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮನ್ನು, ನಿದ್ದೆಗೆ ಸಮಯವಾಯ್ತು ಎಂದು ಎಚ್ಚರಿಸಲು ಅಲಾರಾಮ್ ಬಳಸಿ, ಮಲಗುವ ವ್ಯವಸ್ಥೆ ಮಾಡಿಕೊಳ್ಳಿ
6) ಬೇಗ ಏಳಬೇಕೆಂದರೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ಬೇಗ ಮಲಗುವುದು, ಅಲ್ಲವೇ?
7) ಅಲಾರಾಮ್ ಘಂಟೆಯ ಧ್ವನಿಯಿಂದ ಶಾಕ್ ಆದ ಮೆದುಳಿನ ಆಯಾಸ ಓದಲು ಸಮರ್ಥವಲ್ಲ, ಆದ್ದರಿಂದ ನೀವು ಎಚ್ಚರಗೊಳಿಸಿದರೂ ಆಗ ಮಕ್ಕಳು ತೂಕಡಿಸುತ್ತವೆಯೇ ಹೊರತೂ ವಿಷಯಗ್ರಹಣೆ ಮಾಡಲಾರವು...
8) ಬ್ರಾಹ್ಮಿ ಮುಹೂರ್ತವು ಆ ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲು ಅತ್ಯಂತ ಶ್ರೇಯಸ್ಕರ. ಕೆಲಸ ಮಾಡಲು ಅಲ್ಲ.
9) ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಂಡರೂ ಸಹ, ಜೀರ್ಣಾಜೀರ್ಣದ ಕಡೆ ಗಮನಕೊಟ್ಟು, ಏಳಬೇಕೇ?ಅಥವಾ ಇನ್ನೂ ಮಲಗಬೇಕೇ? ಎಂದು ನಿರ್ಧರಿಸಬೇಕು.
10) ಸಹಜವಾಗಿ ಎಚ್ಚರಗೊಂಡರೂ ಸಹ ಹಿಂದಿನ ರಾತ್ರಿಯ ಆಹಾರ ಜೀರ್ಣವಾಗಿದ್ದರೆ ಎದ್ದುಬಿಡಿ. ಜೀರ್ಣವಾಗಿಲ್ಲ ಎನಿಸಿದರೆ, ಬಲವಂತದಿಂದ ಎದ್ದು ಕೆಲಸ ಆರಂಭಿಸುವ ಬದಲು ನಿದ್ದೆಯನ್ನು ಪೂರ್ಣಗೊಳಿಸಿ.
ಆಹಾರ ಜೀರ್ಣಗೊಂಡರೆ, ಮಲಪ್ರವೃತ್ತಿ ಸಹಜವಾಗಿ ಆಗುತ್ತದೆ, ಸಹಜ ಮಲಪ್ರವೃತ್ತಿ ಹಸಿವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಹಸಿವಿನ ಅಗ್ನಿ ಆಹಾರವನ್ನು ಪಚಿಸುತ್ತದೆ, ಶರೀರಕ್ಕೆ ಬಲ ತರುತ್ತದೆ ಮತ್ತು ರೋಗಗಳನ್ನು ಭಸ್ಮ ಮಾಡುತ್ತದೆ. ಆದ್ದರಿಂದ ನಿನ್ನೆಯ ಆಹಾರ ಜೀರ್ಣವಾಗುವುದು ಅತ್ಯಂತ ಮುಖ್ಯ, ಅದು ಸಂಪೂರ್ಣ ನಿದ್ದೆಯಿಂದ ಮಾತ್ರ ಸಾಧ್ಯ!
ಧನ್ಯವಾದಗಳು
•••••••••••••••••••••••••••••••••••••••
Tue, 03 Oct 2023
Tue, 03 Oct 2023
Tue, 03 Oct 2023
Write a public review