Published - Tue, 03 Oct 2023
ಬೇಯಿಸಿ ರಾತ್ರಿಕಾಲ ಇಟ್ಟು, ಬೆಳಗಾದ ಮೇಲೆ, ತಂಗಳಾದ ಮೇಲೆ ಉಪಯೋಗಿಸಬಾರದು. ಇವು ವಿಷಕಾರಿಗಳು.
ಸೇವಿಸುವ ಆಹಾರವನ್ನು ರಕ್ಷಣೆ ಮಾಡುವ 'ಅನ್ನರಕ್ಷಾವಿಧಿ' ಆಧ್ಯಾಯದಲ್ಲಿ ಆಚಾರ್ಯ ವಾಗ್ಭಟರು ತಂಗಳು ತಿನ್ನುವುದು ವಿಷಕಾರಿ ಎಂದು ಸ್ಪಷ್ಟ ಮಂತ್ರಗಳಲ್ಲಿ ಹೇಳಿದ್ದಾರೆ.
••••••••••••••••••••••••••••••••••••••
ರಾತ್ರಿ ಅನ್ನದಿಂದ B12 ಸಿಗುತ್ತದೆ, ಒಳ್ಳೆಯದು ಎನ್ನುತ್ತಾರಲ್ಲವೇ
ಇದರಲ್ಲಿ ಒಂದು ತಪ್ಪು ಇದೆ, ಕೆಲವು ಬ್ಯಾಕ್ಟೀರಿಯಾಗಳು ಬೆಳೆದಿರುವ ಕಾರಣ, ಅವುಗಳು B12 ತಯಾರಿಸಿರುತ್ತವೆ. ತಂಗಳನ್ನದಲ್ಲಿ B12 ಇರುತ್ತದೆ ಎನ್ನಬಹುದೇ ಹೊರತೂ 'ಸಿಗುತ್ತದೆ' ಎನ್ನಬಾರದು.
ಇದ್ದರೂ ಏಕೆ ನಮಗೆ ಸಿಗುವುದಿಲ್ಲ, ಎಂದರೆ ಯಾವುದೇ ವಸ್ತು ಅಥವಾ ಧಾನ್ಯಗಳಲ್ಲಿ ಇರುವ ಯಾವುದೇ ಗುಣ-ದೋಷಗಳು ಎಂದಿಗೂ ಯಥಾವತ್ತಾಗಿ ನಮಗೆ ಸಿಗುವುದಿಲ್ಲ. ವಿಶೇಷವಾಗಿ ಮಾನವ ಶರೀರದ ಪೋಷಣೆ ವಿಭಿನ್ನವಾಗಿದೆ. ಮೊದಲು ಮನಸ್ಸು ಏಕಾಗ್ರಗೊಳ್ಳದೇ ಯಾವುದೇ ವಿಷಯ ನಮ್ಮ ಮನಸ್ಸನ್ನೂ ಮತ್ತು ಯಾವುದೇ ಆಹಾರ ನಮ್ಮ ಶರೀರವನ್ನು ಸೇರದು.
ಏಕೆ ತಿನ್ನಬಾರದು?:
ತಂಗಳನ್ನವು ಮನಸ್ಸಿನ ತಮೋಗುಣವನ್ನು ಹೆಚ್ಚಿಸುತ್ತದೆ, ತಮೋಗುಣವು ಏನನ್ನೇ ಆಗಲಿ ಸ್ವೀಕರಿಸುವುದು ಅಸಾಧ್ಯ. ಪಾಠ ಕೇಳುವಾಗ ತಮೋಗುಣದ ಕಾರಣ ಅರೆನಿದ್ದೆಯಲ್ಲಿದ್ದರೆ ಅಥವಾ ತೂಕಡಿಕೆಯಲ್ಲಿದ್ದರೆ ಒಂದೇ ಒಂದು ಶಬ್ದವೂ ಮನೋಬುದ್ಧಿಯನ್ನು ಸೇರುವುದಿಲ್ಲ.
ಹಾಗೆಯೇ, ರಜೋಗುಣ ವರ್ಧನೆ ಆಗಿ ಮನಸ್ಸು ಚಂಚಲವಾಗಿ ಎಲ್ಲೆಲ್ಲೋ ಸುತ್ತುತ್ತಾ ಇದ್ದರೆ, ನಿದ್ದೆ ಮಾಡದಿದ್ದರೂ ಪಾಠ ಮನಕ್ಕೆ ಇಳಿದಿರುವುದಿಲ್ಲ
ಕೆಲವು ತಂಗಳು ಆಹಾರಗಳು 'ತಮಸ್ಸನ್ನು ವರ್ಧಿಸುವವು' ಉದಾ: ತಂಗಳು ಅನ್ನ
ಕೆಲವು ತಂಗಳು ಆಹಾರಗಳು 'ರಜೋಗುಣವನ್ನು ವರ್ಧಿಸುತ್ತವೆ' ಉದಾ: ದೋಸೆ, ಇಡ್ಲಿ
ಇನ್ನೊಂದು ವಿಷಯ ಎಂದರೆ -- ತಂಗಳನ್ನದಿಂದ ಮಾತ್ರ ಅಪ್ರಯೋಜನ ಎಂದು ಭಾವಿಸಬಾರದು. ಬೇರೆ ಸಮಯದಲ್ಲಿಯೂ ಸೇವಿಸಿದ ಅತ್ಯಂತ ಗುಣವಾನ್ ಆಹಾರದ ಸೂಕ್ಷ್ಮಗುಣಗಳನ್ನೂ ಸಹ ದೇಹ ಹೀರದೇ ನಮಗೆ ಅತ್ಯಂತ ಹಾನಿಯನ್ನು ತರುತ್ತದೆ.
ಗಮನಿಸಿ ನೋಡಿ -- ತಂಗಳು ತಿನ್ನುವವರ ಮನಸ್ಸು ಸಣ್ಣ ಸಣ್ಣ ವಿಷಯಕ್ಕೆ ಭಯ ಅಥವಾ ಕಿರಿಕಿರಿಗೊಳ್ಳುತ್ತದೆ. ಕೆಲವರಿಗೆ ಅಪಸ್ಮಾರ ರೋಗವನ್ನೂ ತರುತ್ತದೆ...
ಹಾಗಾಗಿ, ತಂಗಳನ್ನು ರಾಸಾಯನಿಕ ದೃಷ್ಟಿಯಿಂದ ನೋಡಬಾರದು...
ಧನ್ಯವಾದಗಳು
••••••••••••••••••••••••••••••••••••••
Tue, 03 Oct 2023
Tue, 03 Oct 2023
Tue, 03 Oct 2023
Write a public review