Where possibilities begin

We’re a leading marketplace platform for learning and teaching online. Explore some of our most popular content and learn something new.
Total 9 Results
Rather than discussing about diabetes is heridatroty, we should take steps to not carry to next generation

Created by - Dr Mallikarjun Dambal

Rather than discussing about diabetes is heridatroty, we should take steps to not carry to next generation

  ಮಧುಮೇಹ ಅನುವಂಶೀಯವೆಂಬ ಚರ್ಚೆ ಬೇಡ; ಮುಂದಿನ ಪೀಳಿಗೆಗೆ ವರ್ಗಾಯಿಸದಂತೆ ಎಚ್ಚರಿಸೋಣ  ••••••••••••••••••••••••••••••••••••••  ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ  ಸಂಚಿಕೆ: 754, ದಿನಾಂಕ: ••••••••••••••••••••••••••••••••••••••  ಮಧುಮೇಹ ಅನುವಂಶೀಯವೋ ಅಲ್ಲವೋ ಚರ್ಚೆ ಅನಗತ್ಯ; ಮುಂದಿನ ಪೀಳಿಗೆಗೆ ವರ್ಗಾಯಿಸದಂತೆ ಮಾಡಬಹುದಾದ ಉಪಾಯಗಳನ್ನು ನೋಡೋಣ...  ಎಲ್ಲಾ ಅನುವಂಶೀಯ ರೋಗಗಳು ಮಧುಮೇಹದಂತೆ ದೈತ್ಯಾಕಾರವಾಗಿ ಹಬ್ಬುತ್ತಿಲ್ಲವಲ್ಲ, ಇದೇಕೆ ಹೀಗೆ ಎಂಬ ಯೋಚನೆ ನಿಮಗೆ ಬಂದರೆ...  ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದೇ ಇರುವ ಬಗ್ಗೆ ಗಮನ ಕೊಡುತ್ತೀರಿ...  ಮಕ್ಕಳ ಆಹಾರ-ವಿಹಾರಗಳಲ್ಲಿ ಈ ಕೆಳಗಿನ ಎಚ್ಚರಿಕೆಗಳು ಅತ್ಯಗತ್ಯ...• ಆಹಾರದ ಹೆಸರಿನಲ್ಲಿ ಎಲ್ಲಾ ರೀತಿಯ ಕೃತಕ ತಿನಿಸುಗಳಾದ ಜಂಕ್ ಫುಡ್‌ಗಳು, ಮೈದಾ ಪದಾರ್ಥಗಳು ಪ್ಯಾಂಕ್ರಿಯಾಸ್ ಅನ್ನು ಅತ್ಯಂತ ಒತ್ತಡಕ್ಕೆ ನೂಕುತ್ತಿವೆ, ಹಾಗಾಗಿ ಸಂಪೂರ್ಣ ನಿಲ್ಲಿಸುವುದು ಅತ್ಯಂತ ಸೂಕ್ತ ಮತ್ತು ಅನಿವಾರ್ಯ. ????• ಕರಿದ ತಿಂಡಿಗಳು, ಮೇಲೆ ಎಣ್ಣೆ ಕಲಸಿದ ತಿಂಡಿಗಳೂ ಸಹ ಪ್ಯಾಂಕ್ರಿಯಾಸ್‌ಗೆ ಬಲವಾದ ಒತ್ತಡ ಹೇರುತ್ತವೆ, ಇವುಗಳನ್ನು ನಿಲ್ಲಿಸುವುದು ಸೂಕ್ತ, ಇಂದಿನ ಕಾಲಘಟ್ಟದಲ್ಲಿ ಕಷ್ಟ ಎನ್ನುವವರು ಹಬ್ಬಗಳಲ್ಲಿ ಮನೆಯಲ್ಲಿ ಮಾಡುವ ಕರಿದ ಪದಾರ್ಥಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ರೂಢಿ ಮಾಡಿಕೊಂಡರೆ ಮಧುಮೇಹದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ????  ಯಾವುದೋ ಒಂದು ವಿಷಯದ ಮೇಲೆ ಪೋಷಕರಾಗಲೀ, ಸ್ನೇಹಿತರಾಗಲೀ, ಶಾಲೆಯಲ್ಲಾಗಲೀ ಒಂದು ಹಂತದವರೆಗೆ ಮಾತ್ರ ಒತ್ತಡ ಕೊಡಿ, ನಂತರ ನಿಮ್ಮ ಮಕ್ಕಳ ಮನೋ-ಬೌದ್ಧಿಕ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸಿಕೊಂಡು ತಕ್ಕಷ್ಟೇ ಒತ್ತಡದಿಂದ ಅವರ‌ ವಿದ್ಯಾರ್ಥಿ ಜೀವನ ನಿರ್ವಹಿಸಿರಿ.  12 ವರ್ಷದ ಒಳಗಿನ ಮಕ್ಕಳನ್ನು ಕಡ್ಡಾಯವಾಗಿ ರಾತ್ರಿ 9ರ ಒಳಗೆ ನಿದ್ದೆಗೆ ಕಳಿಸಿರಿ.  ಮಕ್ಕಳ ಓದಿಗೆಷ್ಟು ಮಹತ್ವವೋ ಅದಕ್ಕಿಂತಲೂ ಹೆಚ್ಚು ಅವರ ಶಾರೀರಿಕ ಶ್ರಮಕ್ಕೆ ಮಹತ್ವ ಕೊಡಿ.  ರಾಸಾಯನಿಕ ಗೊಬ್ಬರ ಹಾಕಿ ಬೆಳೆದ, ಕೀಟನಾಶಕ ಸಿಂಪಡಿಸಿ ಬೆಳೆದ ಧಾನ್ಯಗಳಿಂದ ತಯಾರಾದ ಆಹಾರಗಳನ್ನು ಕೊಡಬೇಡಿ, ನೀವೂ ಸಹ ಸೇವಿಸಬೇಡಿ. ಈ ವಿಷ ಪ್ಯಾಂಕ್ರಿಯಾಸ್ ಅನ್ನು ಕೆಡಿಸುತ್ತದೆ, ಎಚ್ಚರ. ನೈಸರ್ಗಿಕ ರೀತಿಯಲ್ಲಿ ಶುದ್ಧವಾಗಿ ಬೆಳೆದ ಆಹಾರಗಳನ್ನಷ್ಟೇ ಮಕ್ಕಳಿಗೆ ಕೊಡಿ ಮತ್ತು ನೀವೂ ಸೇವಿಸಿರಿ...  ಮನಸ್ಸನ್ನು ಅತಿಯಾದ ತವಕದಿಂದ, ಆಸೆಯಿಂದ ಹಿಂದೆ ತೆಗೆದು ಸಮಾಧಾನವಾಗಿ ಹೆಜ್ಜೆ ಹಾಕುವುದನ್ನು ಪೋಷಕರು ಮಾಡುವುದರಿಂದ ಮಕ್ಕಳು ಆತಂಕರಹಿತರಾಗುತ್ತಾರೆ. ಈ ಆತಂಕರಹಿತ ಸ್ಥಿತಿ ಮಧುಮೇಹವನ್ನು ಮುಂದಿನ ಪೀಳಿಗೆಗೆ ಹೋಗದಂತೆ ತಡೆಯುತ್ತದೆ! ????  12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಆಯುರ್ವೇದ ಪದ್ಧತಿಯಿಂದ ಶರೀರವನ್ನು ಶುದ್ಧೀಕರಣಗೊಳಿಸುವ ಪಂಚಕರ್ಮಗಳನ್ನು ಪ್ರತಿ ವರ್ಷ ಮಾಡಿಸುವುದು. ಅನುವಂಶೀಯತೆಯನ್ನು ತಡೆಯಲು ಇದು ಅತ್ಯಂತ ಮಹತ್ವದ ಚಿಕಿತ್ಸಾ ಪದ್ಧತಿಯಾಗಿದೆ.     ಧನ್ಯವಾದಗಳು••••••••••••••••••••••••••••••••••••••  'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿನ ಹಿಂದಿನ 700+ ಸಂಚಿಕೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಮಾತ್ರ ಕಾಣಸಿಗುತ್ತವೆ.  ಧನ್ಯವಾದಗಳು  ••••••••••••••••••••••••••••••••••••••  ವಿಶ್ವ ಹೃದಯಾಶೀರ್ವಾದವಂ ಬಯಸಿ  ~ಡಾ. ಮಲ್ಲಿಕಾರ್ಜುನ ಡಂಬಳ  ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

More details

Published - Tue, 03 Oct 2023

Solutions for Diabetes in kids

Created by - Dr Mallikarjun Dambal

Solutions for Diabetes in kids

 ಅಮೃತಾತ್ಮರೇ, ನಮಸ್ಕಾರ     ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-648    •••••••••••••••••••••••••••••••••••••••ಮೊದಲ ಸೂಚನೆ:  ಇವರಿಗೆ ಸಾಮಾನ್ಯ ಮಧುಮೇಹಿಗಳಂತೆ ಚಿಕಿತ್ಸೆ ಮತ್ತು ಉಪಚಾರಗಳನ್ನು ಮಾಡಬಾರದು...•••••••••••••••••••••••••••••••••••••••  ಜನ್ಮಾರಭ್ಯ ಬರುವ ಮಧುಮೇಹಕ್ಕೆ ಮೇದಸ್ಸಿನ ವೃದ್ಧಿ(ಸ್ನಿಗ್ಧಾಂಶ, ಕ್ಲೇದ, ಸಕ್ಕರೆ ಅಂಶ) ಕಾರಣವಲ್ಲ. ಬದಲಾಗಿ ಮೇದಧಾತುವಿನ ಕ್ಷಯ ಕಾರಣವಾಗಿದೆ. ಶೇ.5 ರಷ್ಟು ಮಕ್ಕಳಿಗೆ ಇನ್ಸುಲಿನ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೇಕಾಗಬಹುದು, ಉಳಿದವರಿಗೆ ಅಲ್ಲ.  ಚಿಕಿತ್ಸೆ ಅತ್ಯಂತ ನಿರ್ದಿಷ್ಟವಾಗಿ ಪ್ರತಿ ಮಗುವಿಗೆ ಭಿನ್ನವಾಗಿ ಇರಬೇಕು, ಪ್ರತಿ ತಿಂಗಳೂ ವಿಭಿನ್ನ ಪ್ರಮಾಣದ ಔಷಧಿ ಉಪಚಾರಗಳು ಬೇಕಾಗಬಹುದು. ಇಲ್ಲಿ ಯಶಸ್ಸಿಗೆ ಬಹಳ ಅಡ್ಡಿಗಳು ಬರುತ್ತವೆ, ಅಜೀರ್ಣ ಎಂಬುದು ಅದರಲ್ಲಿ ಬಹು ದೊಡ್ಡ ಅಡ್ಡಿ. ಸೂಕ್ಷ್ಮದೃಷ್ಟಿಯ ವೈದ್ಯ ಮಾತ್ರ ಆಗಾಗ ನಿರ್ವಹಿಸಬಲ್ಲ.  ಶೇ.60 ಕ್ಕಿಂತಲೂ ಹೆಚ್ಚು ಬಲ ಬಂದಮೇಲೆ, ಚಿಕಿತ್ಸೆ ಸರಳವಾಗುತ್ತಾ ಸಾಗುತ್ತದೆ. ಏಕೆಂದರೆ ಒಮ್ಮೆ ಸಾರ ಅಥವಾ ಸಶಕ್ತ ಮೇದಸ್ಸು ತನ್ನ ಸ್ಥಾನದಲ್ಲಿ ನೆಲೆಯೂರಿದರೆ ಇನ್ನು ಬೇಗ ಬೇಗ ತನ್ನನ್ನು ತಾನೇ ನಿವ೯ಹಿಸಿಕೊಳ್ಳುತ್ತದೆ, ಅಲ್ಲಿಯವರೆಗೆ ಹೋರಾಟ ಇದ್ದದ್ದೇ.  ಇದು ಹೇಗೆ ಎಂದರೆ, ಬೆಳೆವ ಮಗುವನ್ನು ತಾಯಿ ಪೋಷಣೆ ಮಾಡಿದರೆ, ಸದೃಢವಾದ ಮಗು ಅದೇ ತಾಯಿಯನ್ನು ತಾನು ಪೋಷಣೆ ಮಾಡಿದಂತೆ!  ಈ ಸಿದ್ಧಾಂತಗಳು, ಚಿಕಿತ್ಸಾ ಸೂಕ್ಷ್ಮತೆಗಳನ್ನು ವೈದ್ಯರ ಪಾಲಿಗೆ ಬಿಟ್ಟು, ಜನಸಾಮಾನ್ಯರು ಹೇಗೆ ಸಹಕರಿಸಬೇಕೆಂಬುದನ್ನು ನೋಡೋಣ...• ಆಯುರ್ವೇದ ವೈದ್ಯರು ಸೂಚಿಸುವ ಆಹಾರ ಕ್ರಮ ಮತ್ತು ಉಪಚಾರಗಳನ್ನು ಅಲೋಪತಿಯ ಜ್ಞಾನ, ಇಂಟರ್‌ನೆಟ್ ಮಾಹಿತಿ, ನಿಮ್ಮ ತಿಳಿವಳಿಕೆಯೊಂದಿಗೆ ತರ್ಕ ಮಾಡಿ, ಸ್ವಲ್ಪ ನಿಮ್ಮದು, ಸ್ವಲ್ಪ ವೈದ್ಯರ ಸಲಹೆ ಹೀಗೆ ಮಾಡದಿರಿ. ಇಲ್ಲಿ ಈ ತರ್ಕ ನಡೆಯದು, ಏಕೆಂದರೆ IDDM ನ ಬಗ್ಗೆ ಇದುವರೆಗೆ ಸಿಗುವ ಮಾಹಿತಿಗಳೆಲ್ಲಾ, ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ನಿಷ್ಕ್ರಿಯ ಆದ ಬಳಿಕದ ಮಾಹಿತಿ ಮತ್ತು ಉಪಚಾರಗಳು ಮಾತ್ರ. ಇಲ್ಲಿ ಮಾಡಲು ಹೊರಟಿರುವುದು ಆ ಪ್ಯಾಂಕ್ರಿಯಾಸ್ ಹೇಗೆ ಹಾಳಾಯ್ತು ಮತ್ತು ಅದನ್ನು ಮರುಪೂರಣ ಮಾಡುವ ಚಿಕಿತ್ಸೆ. ಒಂದಕ್ಕೊಂದು ತದ್ವಿರುದ್ಧವಾಗಿ ಕಾಣುತ್ತವೆ ಹಾಗಾಗಿ, ಪೂರ್ವಾಗ್ರಹ ಇಲ್ಲದೇ ವಿಚಾರವನ್ನು ತಿಳಿದುಕೊಳ್ಳಿ, ಆದರೆ, ಸಧ್ಯ ಇರುವ ಮೇಲ್ಮಟ್ಟದ ಮಾಹಿತಿಯ ಅನುಸಾರ ಉಪಚಾರ ಮಾಡುವ ಸಾಹಸವು ಚಿಕಿತ್ಸಾ ಸಾಫಲ್ಯವನ್ನು ಕೊಡುವುದಿಲ್ಲ.• ಶೇ.60 ಕ್ಕಿಂತ ಹೆಚ್ಚು ಗುಣ ಆಗುವವರೆಗೆ ಸ್ವಲ್ಪವೂ ಸಿಹಿ ಪದಾರ್ಥಗಳನ್ನು ಕೊಡಬಾರದು, ಸಕ್ಕರೆ ಅಂಶ ಕಡಿಮೆ ಆದರೆ?! ಎಂಬ ಪ್ರಶ್ನೆ ಬಂದರೆ, ಆಯುರ್ವೇದ ಚಿಕಿತ್ಸೆ ಪ್ರಾರಂಭ ಆದ ದಿನದಿಂದ ಅಂತಹ ಅವಸ್ಥೆ ಎಂದಿಗೂ ಬಾರದು(ನೀವಾಗಿ ಅಪಥ್ಯ ಮಾಡದಿದ್ದರೆ ಮಾತ್ರ).• ಅಗ್ನಿವರ್ಧಕವಾದ ಕಾರಣ ತುಪ್ಪವನ್ನು ಕೊಡಬೇಕಾಗುತ್ತದೆ, ಇಲ್ಲಿ ಔಷಧ ಸಿದ್ಧ ತುಪ್ಪಗಳನ್ನೇ ಪ್ರಧಾನವಾಗಿ ಬಳಸಬೇಕು. ಅಂಗಡಿಯಲ್ಲಿ ಸಿಗುವ ಪ್ಯಾಕ್ಡ್ ತುಪ್ಪಗಳು ಅಪಾಯಕರ.• ಇನ್ಸುಲಿನ್ ಮೊದಲ ತಿಂಗಳಿನಿಂದಲೇ ಶೇ.10 ರಷ್ಟು ಕಡಿಮೆ ಮಾಡಲಾಗುತ್ತದೆ, ಒಂದೆರಡು ತಿಂಗಳಲ್ಲಿ ಶೇ.50 ರಷ್ಟು ಕಡಿಮೆ ಮಾಡಬಹುದು, ಎಲ್ಲವೂ ಕೇವಲ ಔಷಧಿಯ ಮೇಲೆ ಅವಲಂಬಿತವಲ್ಲ. ಆಹಾರ-ವಿಹಾರ ನಿಯಮ ಅತೀ ಮುಖ್ಯ.• ತರ್ಕ ತಿಳಿಯದ ಪುಟ್ಟ ಮಗು, ಹೇಳಿದಂತೆ ಪಾಲಿಸುವ ಪೋಷಕರು ಇದ್ದರೆ ಚಿಕಿತ್ಸೆ ಸುಲಭ. ಮಗು ಬೌದ್ಧಿಕವಾಗಿ ಬೆಳೆದು, ಚಿಂತೆಗೆಡುವುದು, ರಾತ್ರಿ ನಿದ್ದೆಗೆಡುವುದು, ತನ್ನದೇ ಆಲೋಚನೆಯನ್ನು ಹೇರಲು ಪ್ರಾರಂಭಿಸಿಕೊಂಡರೆ, ವೈದ್ಯರು ಮತ್ತು ಪೋಷಕರು ಮಾಡುವ ಸರ್ವ ಪ್ರಯತ್ನವೂ ವ್ಯರ್ಥವಾಗಿ ಪರಿಣಮಿಸುತ್ತವೆ. ಅಂತವರಲ್ಲಿ ಇನ್ಸುಲಿನ್ ಕಡಿಮೆ ಮಾಡಬಹುದಷ್ಟೇ, ನಿಲ್ಲಿಸುವುದು ಅಸಾಧ್ಯ.• ಇವರಲ್ಲಿ ಸಕ್ಕರೆ ಅಂಶ ತುಸು ಹೆಚ್ಚಾಗಿ ಇಟ್ಟುಕೊಳ್ಳುವುದು ಮುಖ್ಯ, ಏಕೆಂದರೆ ಅದು ನಿಧಾನವಾಗಿ ಶುದ್ಧ ಮೇದಸ್ಸನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಪೂರ್ಣ ಸಂಗ್ರಹವಾದ ನಂತರ ತಾನಾಗಿಯೇ ಸಹಜತೆಗೆ ಬರುತ್ತದೆ.• ದಯಮಾಡಿ ಈ ಮಾಹಿತಿಯನ್ನು ಗಂಭಿರವಾಗಿ ಪರಿಗಣಿಸಿ - ಲ್ಯಾಬೋರೇಟರಿಗಳಲ್ಲಿ ಹೇಳಿರುವ ಸಕ್ಕರೆಯ ನಾರ್ಮಲ್ ಅಂಶ - ಅದು ನಮ್ಮ ಆರೋಗ್ಯವನ್ನು ಸರಿಮಾಡುವುದಕ್ಕಿಂತ ಕಾಣದ ಕೈಗಳ ವ್ಯಾಪಾರದ ಆಟವಾಗಿದೆ. ಅದರ ನಾರ್ಮಲ್ ಅಂಶವನ್ನು ಕಡಿಮೆ ಮಾಡಿದಷ್ಟೂ ವ್ಯಾಪಾರ ಜೋರು ಅಲ್ಲವೇ? ಹೇಗೆ ಇರಬೇಕೆಂದರೆ ನಿಮ್ಮ ಶರೀರ ಯಾವ ಲಕ್ಷಣವನ್ನೂ ತೋರುತ್ತಿಲ್ಲ ಎಂದರೆ ನಿಮ್ಮ RBS 200-250 ಇದ್ದರೂ ಅದು ನಾರ್ಮಲ್. ನೀವು ಆರೋಗ್ಯದಿಂದ ಇರುವುದು ಮುಖ್ಯವೇ ಹೊರತು, ನಿಮಗೆ ಕೊಡುವ ರಿಪೋರ್ಟ್ ಅಲ್ಲ!!• ಮಗುವಿಗೆ ಸರಿಯಾದ ಸಮಯಕ್ಕೆ ನಿದ್ದೆಗೆ ಬಿಡಿ, ಚೆನ್ನಾಗಿ ನಿದ್ದೆ ಮಾಡಲಿ, ಆತಂಕವನ್ನು ಒಟ್ಟಾರೆ ಹಾಕಲೇಬೇಡಿ. ಮಗುವಿನ ಮೇದಸ್ಸು ತೆಳುವಾಗಿ, ಅಶಕ್ತವಾಗಿ ಇರುವ ಕಾರಣ ಒತ್ತಡ ಎನಿಸುವ ಚಟುವಟಿಕೆಗಳನ್ನು ಮಾಡಲು ಒತ್ತಾಯಿಸಬೇಡಿ, ವಿಶೇಷವಾಗಿ ಶಾಲಾ ಅಂಕಪಟ್ಟಿಯ ವರ್ಧನೆಗೆ ತೊಡಗಬೇಡಿ, ಮಾಹಿತಿಗಿಂತ ಸ್ಫೂರ್ತಿ ಮುಖ್ಯ.• ತಾಯಂದಿರೇ, ಬೆಳಗಿನ ಉಪಾಹಾರದ ಬಗ್ಗೆ ವಿಶೇಷ ಗಮನ ಇರಲಿ. ಇಡೀ ಚಿಕಿತ್ಸಾ ಅವಧಿಯಲ್ಲಿ ಒಮ್ಮೆ ಕಲಸನ್ನಗಳು, ಫರ್ಮಂಟೆಡ್ ಆಹಾರಗಳಾದ ಮಾಮೂಲಿ ದೋಸೆಗಳನ್ನು ಕೊಟ್ಟರೂ ಅರ್ಧದಲ್ಲಿ ಕೈ ಕತ್ತರಿಸಿಕೊಂಡಂತೆಯೇ ಸರಿ. ನೀರುದೋಸೆ ಕೊಡಬಹುದು, ಅಕ್ಕಿ ಕಡುಬು ಕೊಡಬಹುದು, ತೆಳುವಾಗಿ, ಮೃದುವಾಗಿ ಇರುವ ಪಲಾವ್, ಗೋಧಿ ಉಪ್ಪಿಟ್ಟು ಕೊಡಬಹುದು.• ಹಿಂದಿನ ದಿನದ ಆಹಾರಗಳು, ಪ್ಯಾಕ್ಡ್ ತಿಂಡಿಗಳು, ಬೇಕರಿ ಪದಾರ್ಥಗಳು ಸರ್ವದಾ ಬೇಡ• ಹಗಲು ನಿದ್ದೆ, ರಾತ್ರಿ ಜಾಗರಣಗಳು ಅತ್ಯಂತ ನಿಷಿದ್ಧ.•••ಹೀಗೆ, ಸೂಕ್ಷ್ಮತೆಯಿಂದ ಪಾಲಿಸಿ, ಒಮ್ಮೆ ಮೇದಸ್ಸು ಸ್ಥಿರವಾಗಲು ಬಿಡಿ, ನಂತರ ಸಾಮಾನ್ಯ ಜೀವನ ಮಾಡಬಹುದು...•••••••••••••••••••••••••••••••••••••••  ಭಗವಂತನ ಶ್ರೀ ಕೃಪೆಯಿಂದ ಸರ್ವರಿಗೂ ಒಳಿತಾಗುತ್ತದೆ...   ಧನ್ಯವಾದಗಳು 

More details

Published - Tue, 03 Oct 2023

Threat if you neglect diabetes

Created by - Dr Mallikarjun Dambal

Threat if you neglect diabetes

•••••••••••••••••••••••••••••••••••••••  ಮಧುಮೇಹ ಮರೆತರೆ ಮಹಾ ಅಪಾಯ  ಇದೇನು ವೈದ್ಯರು ಇದುವರೆಗೆ ಹೇಳಿದ ಹೇಳಿಕೆಗಳಿಗೆ ವಿರುದ್ಧವಾಗಿ‌ ಬರೆದಿದ್ದಾರಲ್ಲ  ಆಹಾರ ಪಾಲನೆಯನ್ನೂ, ಜೀವನ ಶೈಲಿ ಪಾಲನೆಯನ್ನೂ ಮಾಡದೇ "ಆಸ್ಪತ್ರೆ ರಹಿತ ಜೀವನ ಮಾಹಿತಿಯನ್ನು ಕೇವಲ ಓದುವೆ ಪಾಲಿಸಲಾರೆ", ಅದರಿಂದಲೇ ಮಧುಮೇಹವನ್ನು ಗೆಲ್ಲುವೆ ಎಂದು ಉಪೇಕ್ಷಿಸುವ ನಿಲುವು ತಳೆದವರಿಗೆ ಇಂದಿನ‌ ಸಂಚಿಕೆ ಮೀಸಲು... •••••••••••••••••••••••••••••••••••••••ಆತ್ಮೀಯರೇ,  ಅತ್ಯಂತ ನೋವಿನ ಸಂಗತಿ ಎಂದರೆ, ಆಸ್ಪತ್ರೆ ರಹಿತ ಜೀವನದ ಕೆಲ ಸೋಂಬೇರಿ ಸದಸ್ಯರು, ಮಧುಮೇಹ ಎಂಬುದು ಇಲ್ಲವೇ ಇಲ್ಲ, ಅದನ್ನು ಉಪೇಕ್ಷಿಸಬಹುದು, ಆಧುನಿಕ ವೈದ್ಯರು ಸುಮ್ಮನೇ ಹೆದರಿಸುತ್ತಿದ್ದಾರೆ, ನಾವು ಆಸ್ಪತ್ರೆ ರಹಿತ ಜೀವನ ಗುಂಪಿನಲ್ಲಿದ್ದೇವೆ, ಹಾಗಾಗಿ ನಮಗೆ ಏನೂ ಆಗದು. ಇಂತಹ ನಿರ್ಧಾರಕ್ಕೆ ಬಂದ ನನ್ನ ಆತ್ಮೀಯರೊಬ್ಬರಿಗೆ ಎಚ್ಚರಿಸುತ್ತಾ ಈ ಸಂಚಿಕೆ ಬರೆಯುವ ಯೋಚನೆ ಬಂದಿತು...  ಸತ್ಯ ಶೇ. 80 ರಷ್ಟು ಜನರ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಹುದು, ಶೇ. 50 ರಷ್ಟು ಜನರನ್ನು ಖಂಡಿತಾ ಔಷಧ ರಹಿತವಾಗಿ ಕೇವಲ ಆಹಾರ ಪಾಲನೆಯಿಂದಲೂ, ಶೇ. 30 ರಷ್ಟು ಔಷಧಗಳಿಂದ, ಬಹು ಬಿಗಿಯಾದ ಆಹಾರ ಪದ್ಧತಿಗಳ ಪಾಲನೆಯಿಂದ ಗುಣಪಡಿಸಬಹುದು...  ಇದರ ಅರ್ಥ ಆಹಾರ ನಿಯಮ ಪಾಲಿಸದೇ, ವ್ಯಾಯಾಮ ಮಾಡದೇ, ಬರೀ ಮಾಹಿತಿಯನ್ನು ಓದಿ, ಪಾಲಿಸದಿರುವವರೇ ಎಚ್ಚರ ನಿಮಗಾಗಿ ಹೇಳುವೆ -- ಮಧುಮೇಹ ಮರೆತರೆ ಮಹಾ ಅಪಾಯ!!   ಏಕೆಂದರೆ, ಮಧುಮೇಹ ಬರುವುದು "ಕ್ಲೇದ" ಎಂಬ ಕೊಬ್ಬಿನ ಅಂಶದಿಂದ, ಅದನ್ನು ವ್ಯಾಯಾಮದಿಂದ ಕರಗಿಸಬೇಕು ಮತ್ತು ಆಹಾರದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಈ ಕ್ಲೇದವು  ನರಗಳನ್ನು ರಕ್ತನಾಳಗಳನ್ನು ಪೋಷಣೆ ಮಾಡಲು ಅಸಮರ್ಥತೆಯನ್ನು ಹೊಂದಿರುವ ಕಾರಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳ ವಿಕಾರವನ್ನು ಉಂಟು ಮಾಡಬಲ್ಲದು. ಹಾಗಾಗಿ, ಔಷಧಿ ಬೇಡ ಎಂದು ಹೇಳುತ್ತಿರುವೆವೇ ಹೊರತು ಬೇಕಾಬಿಟ್ಟಿ ಜೀವನ ಮಾಡುವುದನ್ನು "ಆಸ್ಪತ್ರೆ ರಹಿತ ಜೀವನ" ಮಾಲಿಕೆಗಳು ಅನುಮೋದಿಸುತ್ತಿಲ್ಲ.  ಮತ್ತು ಆಧುನಿಕ ಔಷಧಿಗಳು ತರುವ ಅಪಾಯವನ್ನು ತಿಳಿಸುವುದು, ರೋಗರಹಿತವಾಗಿದ್ದರೆ ಮಾತ್ರ ಆನಂದಮಯ ಜೀವನವನ್ನು ಮಾಡಲು ಸಾಧ್ಯ ಎಂದು ಹೇಳುವುದೇ ಈ ಗುಂಪಿನ ಮೂಲೋದ್ದೇಶ...  ಆಹಾರ ಪಾಲನೆ ಅಸಾಧ್ಯ ಎನುವವರು ಅತಂತ್ರಕ್ಕೆ ಒಳಗಾಗುವುದು ಬೇಡ. ಸಧ್ಯಕ್ಕೆ ನಿಮ್ಮಲ್ಲಿ ಇರುವ ಔಷಧಿಗಳನ್ನೇ ಸೇವಿಸಿ, ನಿಮ್ಮದಿಯಿಂದ ಇರಿ...  ಕೇವಲ ಪುಸ್ತಕ ಓದಿದರೆ ಆರೋಗ್ಯ ಲಭಿಸದು...     

More details

Published - Tue, 03 Oct 2023

Food and life style solutions for Rheumatoid arthritis

Created by - Dr Mallikarjun Dambal

Food and life style solutions for Rheumatoid arthritis

ಇದು ಆಯುರ್ವೇದದಲ್ಲಿ ಮಾತ್ರ ಹೇಳಿರುವ ಸತ್ಯ...  ನಮ್ಮ‌ಆಹಾರಗಳಲ್ಲೇ ಅನೇಕ ಕಾಯಿಲೆಗಳನ್ನು ತಡೆಯಬಹುದು, ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಬಹುದು, ಚಿಕಿತ್ಸೆ ಕೂಡಾ ಮಾಡಿಕೊಳ್ಳಬಹುದು...•••••••••••••••••••••••••••••••••••••••ಕಾಯಿಲೆಯ ಪರಿಚಯ:  ಆಳವಾದ ಅಜೀರ್ಣ ರೋಗವು, ರಸದ ರೂಪದಲ್ಲಿ ಸರ್ವಶರೀರವನ್ನು ಸಂಚರಿಸಿ, ಸಂಧಿಗಳ ನೋವು, ಊತ, ಸೆಳೆತ, ಮಾಂಸಖಂಡಗಳ ಬಿಗಿ ಹಿಡಿತ, ಬೆನ್ನು ಹಿಡಿಯುವಿಕೆ. ಚಳಿಗೆ ಹೆಚ್ಚಾಗುವಿಕೆ, ಚೇಳು ಕಡಿದವರಂತೆ ತಡೆಯಲಾರದ ನೋವನ್ನು ತರುವುದೇ ಆಮವಾತ ಇಲ್ಲಿ ಆಧುನಿಕರ ರುಮ್ಯಾಟಿಸಮ್‌ಗೆ ಸರಿಹೊಂದುವ, ಲಕ್ಷಣಗಳಿವೆ...ಚಿಕಿತ್ಸಾ ದೃಷ್ಟಿ:  ಇಲ್ಲಿ ಕಾಯಿಲೆಯ ಕಾರಣ ತಿಳಿಯಬೇಕು ಮತ್ತು ಅವುಗಳನ್ನು ತಕ್ಷಣದಿಂದ ನಿಲ್ಲಿಸಬೇಕು. ಇದು ಮೊದಲ ಚಿಕಿತ್ಸೆ...ನಂತರ,  ಈ ಕಾಯಿಲೆಗೆ ನಿರ್ದಿಷ್ಟ ಆಹಾರವನ್ನು ಆಯುರ್ವೇದ ಆಚಾರ್ಯರು ಉಲ್ಲೇಖಿಸಿದ್ದಾರೆ. ಅವುಗಳನ್ನು ತಪ್ಪದೇ ಪಾಲಿಸಬೇಕು...ಆಮವಾತಕ್ಕೆ ಕಾರಣವೇನು?:  ಆಲಸ್ಯ, ಶಾರೀರಿಕ ಶ್ರಮ ವಹಿಸದೇ ಆಲಸಿಯಾದ ಜೀವನಶೈಲಿ, ಅಜೀರ್ಣ ಇರುವಾಗ ಆಹಾರ ಸೇವನೆ...ಮತ್ತು ಶಕ್ತಿಭರಿತ ಸಕ್ಕರೆ, ಎಣ್ಣೆ, ಗೋಧಿ, ಉದ್ದುಗಳಂತಹ ಆಹಾರ ಸೇವನೆಯ ತಕ್ಷಣವೇ ಬೆವರು ಬರುವಂತೆ ಓಡುವುದು, ಕೆಲಸ ಮಾಡುವುದು, ಮೈಥುನಕ್ರಿಯೆ ನಡೆಸುವುದು...ಇವುಗಳಿಂದ ಹೇಗೆ ಏಕೆ ಆಮವಾತ ಬರುತ್ತದೆ?:  ಆಲಸ್ಯದ ವ್ಯಕ್ತಿ, ಶಕ್ತಿಯುತ ಆಹಾರ ಸೇವಿಸಿದರೆ, ಅಜೀರ್ಣವಾಗುವುದು, ಪಾಚನ ಶಕ್ತಿ ಕ್ಷೀಣಿಸುವುದು ಸತ್ಯ. ಇಂತವರು, ಒಮ್ಮಿಂದೊಮ್ಮೆ ಸಶಕ್ತ ಆಹಾರ ಸೇವಿಸಿ, ಬೆವರನ್ನು ಹೊರಹಾಕುವ ಕ್ರಿಯೆಗಳಲ್ಲಿ ಕೆಲವೇ ಕಾಲ ತೊಡಗಿದರೂ ಸಹ ತೊಂದರೆ ಖಚಿತ. ಇಲ್ಲಿ ಪಚನವಾಗದ ಆಹಾರ ಕರುಳುಗಳಲ್ಲಿ ಇರುತ್ತದೆ, ಬೆವರು ಅಂತಹ ಆಹಾರವನ್ನು ರಕ್ತಕ್ಕೆ ಸೆಳೆದೆಳೆಯುತ್ತದೆ. ಉದಾಹರಣೆಗೆ - ಗಿಡದ ಎಲೆಗಳು ನೀರನ್ನು ಹೊರಹಾಕುತ್ತಿದ್ದರೆ ಬೇರು ನೀರನ್ನು ಸೆಳೆದೆಳೆದು ಕೊಡುವಂತೆ. ಕರುಳಿನಿಂದ ಅಜೀರ್ಣದ ರಾಸಾಯನಿಕಗಳು ಸೆಳೆದು ರಕ್ತದೊಂದಿಗೆ ಬೆರೆತುಬಿಡುತ್ತವೆ. ಆಹಾರವೇ ಆದರೂ, ಸೂಕ್ತ ವಿಭಜನೆ ಇಲ್ಲದೇ ರಕ್ತವನ್ನು ಸೇರಿದ ಈ ಆಹಾರದ ರಾಸಾಯನಿಕಗಳಿಗೆ ಪ್ರತಿಕ್ರಿಯೆ ರೂಪವಾಗಿ ರಕ್ತದ ಅಸ್ವೀಕೃತಿಯೇ ಸಂಧುಗಳ ಮತ್ತು ಮಾಂಸಖಂಡಗಳ ಊತ. ಈ ಅಜೀರ್ಣ ಆಹಾರದ ಅಂಶವನ್ನು ಯಾವುದೋ ಅಪಾಯಕಾರೀ ಅಂಶ ಶರೀರ ಸೇರಿದೆ ಎಂದು ರಕ್ತದ ಅಟೋ ಇಮ್ಯೂನ್ ಸಿಸ್ಟಂ ಸ್ವಯಂ ಚಾಲನೆಗೊಂಡು ಆ ರಾಸಾಯನಿಕವನ್ನು ನಿವಾರಿಸುತ್ತದೆ. ಹೀಗೆ ಸ್ವಯಂಚಾಲಿತ ಇಮ್ಯುನಿಟಿಯೇ ಆಮವಾತ! ಆಮವಾತಹರ ಆಹಾರ:  ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು, ಸ್ವಲ್ಪವೇ ಸ್ವಲ್ಪ ಬೆಲ್ಲ ಸೇರಿಸಿ, ಖಾಲಿ ಹೊಟ್ಟೆಗೆ ಬೆಳಿಗ್ಗೆ ಸಂಜೆ ಕುಡಿಯುವುದು...ಅಪಥ್ಯ:   ಮೊಸರು, ಮಾಂಸಾಹಾರ, ಮೈದಾ, ಉದ್ದು, ಗೋಧಿ ಮುಂತಾದ ಅಜೀರ್ಣವಾಗುವ ಆಹಾರದ ಸೇವನೆ, ಅತಿಮಾತ್ರ ಆಹಾರ ಸೇವನೆ, ಇವುಗಳಿಂದ ತಕ್ಷಣ ರೋಗ ಹೆಚ್ಚುತ್ತದೆ. ಇವುಗಳನ್ನು ತ್ಯಜಿಸಿ ಬಿಡಿ. ಹಾಗೆಯೇ, ಹಗಲು ನಿದ್ದೆ, ಗಾಳಿಗೆ ಮೈ ಒಡ್ಡಿ ಕುಳಿತುಕೊಳ್ಳುವುದು, ಅಜೀರ್ಣದಲ್ಲಿ ನಡಿಗೆ, ಓಡುವುದು. ಇವುಗಳೂ ಸಹ ಅಪಥ್ಯಗಳು, ಇವುಗಳನ್ನು ಮಾಡಬಾರದು...ಆಮವಾತಹರ ವಿಹಾರ:  ಅಲ್ಪ ಆಹಾರ, ಅಲ್ಪ ಚೇಷ್ಠಾ, ನಿರಂತರ ವಿಚಾರ ಮಗ್ನತೆ, ಉಷ್ಣಜಲಪಾನ, ಉಷ್ಣ ಉಪಚಾರ ಅಂದರೆ ಸ್ನಾನ, ಮುಖಪ್ರಕ್ಷಾಲನಕ್ಕೆ ಉಷ್ಣಜಲದ ಉಪಯೋಗ.   ಗುದಪ್ರಕ್ಷಾಲನಕ್ಕೂ ಉಷ್ಣಜಲ ಬಳಸಬಹುದು.ಆಮವಾತ ಚಿಕಿತ್ಸೆ:  ಅಮೃತಬಳ್ಳಿ, ಶುಂಠಿ, ಭದ್ರಮುಸ್ತ, ಏರಂಡಗಳ ಕಷಾಯ ಸೇವನೆ. ಪಂಚಕರ್ಮ ಚಿಕಿತ್ಸೆಯಲ್ಲಿ - ಸದ್ಯೊ ವಿರೇಚನ ಮತ್ತು ಯೋಗಬಸ್ತಿ...•••••••••••••••••••••••••••••••••••••••  ಈ ಎಲ್ಲಾ ಕಾರಣಗಳಿಂದ ಆಮವಾತವನ್ನು ಆಹಾರದಿಂದ ಗುಣಪಡಿಸಬಹುದಾದ ಸಂಗತಿಗಳನ್ನು ಹಂಚಿಕೊಳ್ಳಲು ಬಯಸಿ ಆಹಾರವೇ ಔಷಧ ಎಂಬ ಶೀರ್ಷಿಕೆಯ ಮಾಲಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ...  ಆಚಾರ್ಯರ ಈ ರೋಗನಿದಾನಗಳು (ಕಾಯಿಲೆಯ ಕಾರಣಗಳು) ಸರ್ವಕಾಲಕ್ಕೂ ಪ್ರಸ್ತುತವಾದ ಸತ್ಯಸಂಗತಿಗಳು, ಆದ್ದರಿಂದ ದಯಮಾಡಿ ಸಂಗ್ರಹಿಸಿಟ್ಟು, ಬಳಸಿಕೊಳ್ಳಿ... •••••••••••••••••••••••••••••••••••••••

More details

Published - Tue, 03 Oct 2023

Oils suggestion for different areas

Created by - Dr Mallikarjun Dambal

Oils suggestion for different areas

ರಾಸಾಯನಿಕ ಸಂಘಟನೆಗಳ ಆಧಾರದ ಮೇಲೆ ಇದು ಒಳ್ಳೆಯದು ಇದು ಕೆಟ್ಟದ್ದು ಎಂದು ಅನುಚಿತ ನಿರ್ಧಾರಗಳಿಂದ ಹೆಸರಾಂತ ಆಹಾರ ತಜ್ಞರು, ವೈದ್ಯರೂ ಸೇರಿದಂತೆ ಅಲ್ಪ ಮಾಹಿತಿ ಹೊಂದಿದವರೂ ಸಹ ಇಂಥದೇ ಆಹಾರ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದೆಂದು ಸಾರುತ್ತಿದ್ದಾರೆ. ಈ ರೀತಿಯ ಅನುಚಿತ ಹೇಳಿಕೆಗಳಲ್ಲಿ ಖಾದ್ಯ ತೈಲವೂ ಸೇರಿಕೊಂಡುಬಿಟ್ಟಿದೆ. ರಿಫೈನ್ಡ್ ಎಣ್ಣೆಯ ಬಳಕೆ ದೋಷಪೂರಿತವಾದುದು ಎಂದು ತಿಳಿದಮೇಲಂತೂ ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿ ದೊರೆಯುವ ಖಾದ್ಯ ತೈಲವನ್ನು ಇಡೀ ಜಗತ್ತಿಗೆ ಹಂಚಲು ಅಸಾಧ್ಯವೆಂದು ತಿಳಿದೂ ಸಹ ಅದರ ಗುಣವಿಶೇಷಗಳನ್ನು ಹೋಗಳುತ್ತ ಅದನ್ನು ಬಳಸುವವರು ಶ್ರೇಷ್ಠ ಎಂತಲೂ ,ಅದನ್ನು ಬಳಸದವರು ಏನೋ ಕಳೆದುಕೊಂಡವರಂತೆ ಕೀಳರಿಮೆಯಿಂದ ಬಾಳುವಂತಾಗುತ್ತಿದೆ. ಇದು ಪಾಶ್ಚಾತ್ಯರ ವ್ಯಾಪಾರೀಕರಣದ ಭಾವಧೋರಣೆ. ಆಲೀವ್ ಆಯಿಲ್ ಅನ್ನು ಹೆಚ್ಚು ಪ್ರಚಾರ ಮಾಡುವ ಅವರ ಹಾದಿಯನ್ನೇ ಅನುಸರಿಸಿ ಕೇವಲ ಕೊಬ್ಬರಿ ಎಣ್ಣೆಯೊಂದೇ ಶ್ರೇಷ್ಠ ಎಂದು ಸಾರುತ್ತಿದ್ದೇವೆ. ಈ ದೇಶ ಪ್ರಾಂತ್ಯವಾರು ಆಹಾರ , ಜೀವನಶೈಲಿ ಅಷ್ಟೇ ಏಕೆ ನೈಸರ್ಗಿಕವಾಗಿ ಬರುವ  ಶಾರೀರಿಕ ಪ್ರಕೃತಿಗಳನ್ನೂ ಪ್ರಾಂತ್ಯವಾರು ವಿಭಿನ್ನವಾಗಿ ಇಟ್ಟಿದೆ. ಕನ್ನಡ ಭಾಷೆಯನ್ನೇ ಹತ್ತು ಶೈಲಿಗಳಲ್ಲಿಯೂ , ಮತ್ತು ಒಂದೇ ವಸ್ತುವಿಗೆ ಇದೊಂದೇ ಭಾಷೆಯಲ್ಲಿ ಪ್ರಾಂತ್ಯವಾರು ಬೇರೆ ಬೇರೆ ಶಬ್ದಗಳಿಂದ ಕರೆಯುವಷ್ಟು ವೈವಿದ್ಯಮಯ ಸಹಜ ಬಾಳು ಭಾರತೀಯರದು. ಇಂತಹ ವಿಭಿನ್ನ ಶಾರೀರಿಕ ಪ್ರಕೃತಿ ಉಳ್ಳವರಿಗೆ ಒಂದು ನಿರ್ದಿಷ್ಟ ಆಹಾರವೇ ಶ್ರೇಷ್ಠ ಎಂದು ತಜ್ಞರಾದಿ ಸಾಮಾನ್ಯರೂ ಹೇಳುತ್ತಿರುವುದು ಅನುಚಿತ ಎನಿಸುತ್ತಿದೆ. ಆತ್ಮೀಯರೇ,ನೀವು ಹುಟ್ಟಿದ , ಬೆಳೆದು ಬಾಳಿದ ಪ್ರಾಂತ್ಯದಲ್ಲಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸುವುದರಿಂದ ಶರೀರ ಆರೋಗ್ಯದಿಂದ ಇರಬಲ್ಲದು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವಲಸೆ ಹೋಗಿ ನೇಲಿಸಿದವರು ಕನಿಷ್ಠ ಶೇಕಡಾ 70 ಭಾಗ ತಮ್ಮ ಮೂಲ ಆಹಾರವನ್ನು ಉಳಿದ 30 ಭಾಗ ತಾವು ನೆಲೆಸಿದ ಪ್ರಾಂತೀಯ ಭಾಗದ ಆಹಾರವನ್ನು ಸೇವಿಸುತ್ತ ನಿಧಾನವಾಗಿ ಆಯಾ ಪ್ರಾಂತೀಯ ಆಹಾರಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಬೇಕಾಗುತ್ತದೆ. ★ ಉದಾಹರಣೆಗೆ:ಕರಾವಳಿಯ ಜನರ ಪ್ರಧಾನ ಆಹಾರ ಮೀನು, ಅವರು ಒಳನಾಡುಗಳಲ್ಲಿ ನೆಲೆಸಿ ಮೀನನ್ನೇ ಪ್ರಧಾನ ಆಹಾರವಾಗಿ ಸೇವಿಸಿದರೆ ಅವರಿಗೆ ಚರ್ಮದ ರೋಗ, ಮಧುಮೇಹ ಬರುವ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ, ಕರಾವಳಿಯಲ್ಲಿ ಸದಾ ಬೆವರು ಹೊರಹೋಗುತ್ತ ಚರ್ಮದ ಅಡಿ ಸಂಚಯವಾಗುವ ಕ್ಲೇದ ಅಥವಾ ಜಿಡ್ಡು ನಿರಂತರವಾಗಿ ಬೆವರಿನ ಮುಖಾಂತರ ಹೊರಕ್ಕೆ ಹೋಗಿ ಚರ್ಮ ಮತ್ತು ದೇಹ ನೈಸರ್ಗಿಕವಾಗಿ ಶುದ್ಧಿಯಾಗುತ್ತದೆ. ಅದೇ, ಒಳ ಪ್ರಾಂತ್ಯದಲ್ಲಿ ಅಷ್ಟು ಪ್ರಮಾಣದ ಬೆವರು ಹೊರ ಹೋಗದ ಕಾರಣ ಅದು ಶರೀರದಲ್ಲಿ ಸಂಚಯವಾಗಿ ಚರ್ಮದ ಕಾಯಿಲೆಯನ್ನೋ, ಮಧುಮೇಹವನ್ನೋ ತರುತ್ತದೆ.ಈಗ, ಖಾದ್ಯತೈಲಕ್ಕೆ ಬರೋಣ.ಕರಾವಳಿ ಮಲೆನಾಡಿನ ಜನರಿಗೆ ಶುದ್ಧ ತೆಂಗಿನಎಣ್ಣೆಯು , ಒಳನಾಡಿನವರಿಗೆ ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಯೂ, ಉತ್ತರಕರ್ನಾಟಕ ಭಾಗದವರಿಗೆ ಶೇಂಗಾ, ಕುಸುಬೆ ಎಣ್ಣೆಗಳನ್ನೂ ಹಾಗೆಯೇ, ಉತ್ತರಭಾರತಕ್ಕೆ ಹೋದರೆ ಸಾಸುವೆ ಎಣ್ಣೆಯನ್ನು ಬಳಸುವುದು ಅತ್ಯಂತ ಶ್ರೇಯಸ್ಕರವಾಗಿರುತ್ತದೆ. ಶತಮಾನಗಳಿಂದ ಈ ಶರೀರಕ್ಕೆ ಸಾತ್ಮ್ಯವಾಗಿರುವ ಎಣ್ಣೆಯನ್ನೇ ಬಳಸುವುದರಿಂದ ಆಯಾ ಹವಾಮಾನಕ್ಕೆ ಸೂಕ್ತವಾಗಿ ಶರೀರವನ್ನು ಸಧೃಢವಾಗಿ ಇಟ್ಟಿರುತ್ತದೆ. ಉತ್ತರಕರ್ನಾಟಕದ ಜನರು ಕಡಿಮೆ ಜಿಡ್ಡಿನ ಅಂಶವುಳ್ಳ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಅವರ ಶರೀರ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಹಾಗೆಯೇ ಮಲೆನಾಡಿನ ಶೀತ ಭಾಗದ ಜನ ಹೆಚ್ಚು ಜಿಡ್ಡುಳ್ಳ ಶೇಂಗಾ ಎಣ್ಣೆಯನ್ನು ಬಳಸಿದರೆ ತೊಂದರೆ ಉಂಟಾಗುತ್ತದೆ. ಇತ್ತೀಚಿನ ಜನರ ಜೀವನ ಶೈಲಿಯ ಆಧಾರದಲ್ಲಿ ನಾವು ಆಹಾರವನ್ನು ಹೀಗೆ ವಿಂಗಡಿಸಬಹುದು.ಮಾನವ ಯಾವ ಯಾವ ಪ್ರಾಂತ್ಯದಲ್ಲಿ ನೆಲೆಸಿದರೂ ಅವರು ಅತ್ಯಂತ ಕಡಿಮೆ ಶಾರೀರಿಕ ಶ್ರಮದಿಂದ ಮತ್ತು ಹೆಚ್ಚು ಬೌದ್ಧಿಕ ಸಾಮರ್ಥ್ಯದಿಂದ ದುಡಿಮೆ ಮಾಡುವವರು ಕೊಬ್ಬರಿ ಎಣ್ಣೆಯನ್ನೂ, ಹೆಚ್ಚು ಶಾರೀರಿಕ ಶ್ರಮದಿಂದ ದುಡಿಮೆ ಮಾಡುವವರು ಶೇಂಗಾ, ಸೂರ್ಯಕಾಂತಿ ಮುಂತಾದ ತೈಲಗಳನ್ನು ಬಳಸಬಹುದೆಂದು ಸ್ಥೂಲವಾಗಿ ಹೇಳಬಹುದು. ಆದಾಗ್ಯೂ , ಪ್ರಾಂತೀಯಮಟ್ಟದ ಆಹಾರ ಸೇವನೆ ಸರ್ವದಾ ಶ್ರೇಷ್ಠವಾಗಿ ಇರುವುದು.

More details

Published - Tue, 03 Oct 2023

Get rid of Gastritis and be free from neumorous diseases Solutions

Created by - Dr Mallikarjun Dambal

Get rid of Gastritis and be free from neumorous diseases Solutions

 ನಿಮ್ಮ ಆಮ್ಲಪಿತ್ತವನ್ನು ಇಲ್ಲವಾಗಿಸಿಕೊಳ್ಳಿ ಸಾಕು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಮೆಟಬಾಲಿಕ್ ರೋಗಗಳು ಸೂರ್ಯನೆದುರಿನ ಮಂಜಿನಂತೆ ಕರಗಿಹೋಗುತ್ತವೆ!  ಬೆಳೆವ ಮಕ್ಕಳಲ್ಲಿಯೂ, ದೃಢವಾಗಿ ಇರಬೇಕಾದ ಹದಿಹರೆಯದವರಲ್ಲೂ ಸಹ ದೊಡ್ಡ ದೊಡ್ಡ ರೋಗಗಳು ಪತ್ತೆಯಾಗುತ್ತಿವೆ. ಅದರಲ್ಲೂ -- ಯಕೃತ್ ತೊಂದರೆ, ಕಿಡ್ನಿ ತೊಂದರೆ, ಹೃದ್ರೋಗ, ಕ್ಯಾನ್ಸರ್, ನರರೋಗ, ಮಾನಸಿಕ ವಿಕಾರ, ಅಲರ್ಜಿ, ಅಸ್ತಮಾ...ಮುಂತಾದವುಗಳು...  ಇವೆಲ್ಲಾ ತುಂಬಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ, ಇದಕ್ಕೆಲ್ಲಾ ಒಂದೇ ಕಾರಣ ದೇಹ ಹುಳಿಗಟ್ಟುವಿಕೆ. ಏನಾಗುತ್ತಿದೆ?  ಕೃತಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ನಮ್ಮ ಎಲ್ಲಾ ಆಹಾರಗಳೂ ಹುಳಿಮಯವಾಗಿವೆ. ಏನು ತಿಂದರೂ ಗ್ಯಾಸ್ಟ್ರಿಕ್ ಸಾಮಾನ್ಯ ಎನಿಸಿಬಿಟ್ಟಿದೆ...  ಈ ಗ್ಯಾಸ್ಟ್ರಿಕ್‌ ಎಂದು ಕರೆಸಿಕೊಳ್ಳುವ 'ಆ್ಯಸಿಡ್ ಪೆಪ್ಟಿಕ್ ಕಾಯಿಲೆ'ಯು ಮೇಲೆ ತಿಳಿಸಿದ ಎಲ್ಲಾ ಕಾಯಿಲೆಗಳನ್ನು ಉಂಟುಮಾಡುವ ಮತ್ತು ಪೋಷಿಸಿ ಬೆಳೆಸುವ ವಿಕೃತ ರಸವನ್ನು ತಯಾರಿಸಿ ನಿರಂತರ ಸರಬರಾಜು ಮಾಡುತ್ತದೆ. ಇನ್ನು ಕಾಯಿಲೆಗಳು ಬರದಿರಲು ಸಾಧ್ಯವೇ?!!   ಉದ್ದು ಹಾಕಿ, ಅಕ್ಕಿ ರುಬ್ಬಿ ಇಡುವ ಹಿಟ್ಟಿನಲ್ಲಿ ಚೆನ್ನಾಗಿ ಹುಳಿಬರುತ್ತದೆ ಅಲ್ಲವೇ? ಎಲ್ಲಿಂದ ಬಂತು ಆ ಹುಳಿತನ? ಅದು ಕೊಟ್ಯಾಂತರ ಬ್ಯಾಕ್ಟೀರಿಯಾಗಳ ತೀವ್ರ ಮತ್ತು ಶೀಘ್ರ ಚಟುವಟಿಕೆಯಿಂದ ಅಲ್ಲವೇ? ಅದೇ ರೀತಿಯ ರಸವಿಶೇಷದಿಂದ ಶರೀರದೊಳಗೆ ವಿಪರೀತ ಹುಳಿ ಅಂಶ ಉಂಟಾಗುತ್ತಿರುವ ಕಾರಣ, ನಮ್ಮ ರೋಗನಿರೋಧಕ ಶಕ್ತಿಯನ್ನು ಮೀರಿ ತೀವ್ರವಾಗಿ ಅಸಂಖ್ಯ ಕೋಟಿ ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ. ಈ ಕಾರಣದಿಂದ ಶಕ್ತಿ ಕುಂದಿದ ಜೀವಕೋಶಗಳ ಪ್ರತಿಕ್ರಿಯೆ ನಮ್ಮ ಇಂದಿನ ಮಹಾನ್ ರೋಗಗಳು...   ಶುಕ್ತಪಾಕ ಎಂದು ಕರೆಸಿಕೊಳ್ಳುವ ಈ ಅವಸ್ಥೆ ಕಡಿಮೆ ಆಗದೇ ಹೋದರೆ ರೋಗೋಲ್ಬಣತೆಯಿಂದ ಜಗದ ಜನ ತತ್ತರಿಸುವುದನ್ನು ತಪ್ಪಿಸಲು ಯಾವ ಆ್ಯಂಟಿಬಯೋಟಿಕ್, ಸಕ್ಕರೆ ನಿಯಂತ್ರಕ, ಬಿ.ಪಿ. ನಿಯಂತ್ರಿಸುವ ವಿವಿಧ ಅವೈಜ್ಞಾನಿಕ ಪ್ರಚೋದಕ ವಿಧಾನಗಳು, ಅಲರ್ಜಿ ಅದುಮಿಡುವ ವಿಧಾನಗಳು, ಡಯಾಲೈಸಿಸ್‌ಗಳೂ, ಕಿಮೋಥೆರಪಿಗಳೂ, ರೇಡಿಯೋಥೆರಪಿಗಳಿಗೂ ಅಸಾಧ್ಯ...  ನಾವು ಕಾಯಿಲೆಗಳೊಂದಿಗೆ ಗುರುತಿಸಿಕೊಂಡು ಆಸ್ಪತ್ರೆಗೆ ಹೋದರೆ ಸಿಗುವುದು ಮಾತ್ರೆಗಳು, ಆರೋಗ್ಯ ಅಲ್ಲ!  ಎಷ್ಟೇ ಕ್ಯಾಲ್ಸಿಯಂ ಮಾತ್ರೆ ಸೇವಿಸಿದರೂ ನಿಲ್ಲದ ನಿರಂತರ ಮೂಳೆ ಸವೆತ...   ಎಷ್ಟೇ ಮಧುಮೇಹ ನಿಯಂತ್ರಕ ಮಾತ್ರೆ ಸೇವಿಸಿದರೂ ಇನ್ಸುಲಿನ್ ಹಂತ, ಡಯಾಲೈಸಿಸ್ ಹಂತ, ಹೃದ್ರೋಗದ ಹಂತ ತಲುಪಿಸುವ ಮಧುಮೇಹ...  ಎಷ್ಟೇ ಥೈರಾಯ್ಡ್ ಮಾತ್ರೆ ಸೇವಿಸಿದರೂ ಹೆಚ್ಚುವ ತೂಕ, ಮುಟ್ಟಿನ ತೊಂದರೆ, ಕಡಿಮೆಯಾಗದ TSH ಅಂಶ...  ಎಷ್ಟೇ ಗ್ಯಾಸ್ಟ್ರಿಕ್‌ ಮಾತ್ರೆ ಸೇವಿಸಿದರೂ ನಿಲ್ಲದ ಆಮ್ಲಪಿತ್ತ...  ಹೀಗೆ ಹೇಳುತ್ತಾ ಹೋದರೆ, ಆಸ್ಪತ್ರೆಯಿಂದ ಸಿಗುವುದು ಮಾತ್ರೆಗಳು ಮಾತ್ರ, ಆರೋಗ್ಯವಂತೂ ಖಂಡಿತಾ ಅಲ್ಲ...  ಅದರೊಂದಿಗೆ ಸಿಗುವ ಮಹಾ ದೌರ್ಭಾಗ್ಯ ಎಂದರೆ 'ಶ್ರಮವಹಿಸಿ ದುಡಿದ ಗಳಿಕೆ ತೀವ್ರ ವೇಗದಲ್ಲಿ ಇಳಿದು ಸಾಲದ ಹಂತಕ್ಕೆ ತಳ್ಳಿಬಿಡುವ ಅಪಾಯ'  ಕೊನೆಗೆ, ಸಾಲದಲ್ಲೇ ಕೊನೆಗಾಣುವ ಜೀವ ಆರೋಗ್ಯವನ್ನು ಪಡೆಯುವುದೇ ಇಲ್ಲ!!!  ವ್ಹಾವ್ ಕೇವಲ ಔಷಧ ಕೊಡುವ ವೈದ್ಯಕೀಯ ಪದ್ಧತಿಯೇ? ನೀನೊಂದು ಪ್ರತಿಮನೆಯ ಅಜ್ಞಾತ ಶತ್ರು••••••••••••••••••••••••••••••••••••••ಅತ್ಯಂತ ಸರಳ 5 ಪರಿಹಾರಗಳು:  1. ಸಾವಯವ ಧಾನ್ಯಗಳಿಗೆ ಮರಳಿ ಬನ್ನಿ, ಇದು ಅನಿವಾರ್ಯ.  2. ಕಡ್ಡಾಯವಾಗಿ ಹಸಿದಷ್ಟೇ ಆಹಾರ ಸೇವಿಸಿ, ತಕ್ಕಷ್ಟೇ ಶಾರೀರಿಕ ಶ್ರಮವನ್ನು ಪ್ರತಿದಿನ ತಪ್ಪದೇ ಮಾಡಿ.   3. ಸಕಾಲದಲ್ಲಿ ತಾಜಾ, ಮೃದು ಆಹಾರ ಮಾತ್ರ ಸೇವಿಸಿ, ಅಕಾಲ ಭೋಜನ ಮಾಡದಿರಿ.  4. ಮಲ, ಮೂತ್ರಾದಿ ಶಾರೀರಿಕ ಸೂಚನೆಗಳನ್ನು ತಪ್ಪದೇ ಪಾಲಿಸಿ.  5. ಧನಾತ್ಮಕ ಫಲಿತಾಂಶ ಕೊಡದ ಅನಗತ್ಯ ಚಿಂತೆಗಳಿಂದ ದೂರ ಇದ್ದು, ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.  ಕೃತ್ರಿಮ ಆಹಾರ, ಜೀವನಶೈಲಿಗಳಿಂದ ದೂರದ ಹಾದಿ ಕ್ರಮಿಸಿದ ಮೇಲೆ ಸಹಜತೆಯು ಕಷ್ಟ ಎನಿಸುತ್ತದೆ, ಆದರೆ ನೀವೂ, ನಿಮ್ಮ ಸಂತಾನ ಆರೋಗ್ಯದಿಂದ ಇರಲು, ಕುಲ ಮುಂದುವರಿಯಲು ಇದು ಅನಿವಾರ್ಯ...                 ...........  ಏನು ತಿಂದರೆ ಏನು ಸಿಗುತ್ತದೆ ಎಂಬುದು ಅಪ್ರಾಕೃತಿಕ ಕೇವಲ ಲೆಕ್ಕಾಚಾರ, ಏನನ್ನು ಜೀರ್ಣಿಸಿಕೊಂಡರೆ ಏನು ಸಿಗುತ್ತದೆ ಎಂಬುದು ಮಾತ್ರ ಸತ್ಯ!  ಆಹಾರ ವಿಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ...••••••••••••••••••••••••••••••••••••••  ಆಯುರ್ವೇದ ವಿಷಯಗಳ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ‌ ರಹಿತ‌ ಜೀವನ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು. 

More details

Published - Tue, 03 Oct 2023

Fermented food is dangerous

Created by - Dr Mallikarjun Dambal

Fermented food is dangerous

   ಬೇಯಿಸಿ ರಾತ್ರಿಕಾಲ ಇಟ್ಟು, ಬೆಳಗಾದ ಮೇಲೆ, ತಂಗಳಾದ ಮೇಲೆ ಉಪಯೋಗಿಸಬಾರದು. ಇವು ವಿಷಕಾರಿಗಳು.  ಸೇವಿಸುವ ಆಹಾರವನ್ನು ರಕ್ಷಣೆ ಮಾಡುವ 'ಅನ್ನರಕ್ಷಾವಿಧಿ' ಆಧ್ಯಾಯದಲ್ಲಿ ಆಚಾರ್ಯ ವಾಗ್ಭಟರು ತಂಗಳು ತಿನ್ನುವುದು ವಿಷಕಾರಿ ಎಂದು ಸ್ಪಷ್ಟ ಮಂತ್ರಗಳಲ್ಲಿ ಹೇಳಿದ್ದಾರೆ.••••••••••••••••••••••••••••••••••••••  ರಾತ್ರಿ ಅನ್ನದಿಂದ B12 ಸಿಗುತ್ತದೆ, ಒಳ್ಳೆಯದು ಎನ್ನುತ್ತಾರಲ್ಲವೇ  ಇದರಲ್ಲಿ ಒಂದು ತಪ್ಪು ಇದೆ, ಕೆಲವು ಬ್ಯಾಕ್ಟೀರಿಯಾಗಳು ಬೆಳೆದಿರುವ ಕಾರಣ, ಅವುಗಳು B12 ತಯಾರಿಸಿರುತ್ತವೆ. ತಂಗಳನ್ನದಲ್ಲಿ B12 ಇರುತ್ತದೆ ಎನ್ನಬಹುದೇ ಹೊರತೂ 'ಸಿಗುತ್ತದೆ' ಎನ್ನಬಾರದು.  ಇದ್ದರೂ ಏಕೆ ನಮಗೆ ಸಿಗುವುದಿಲ್ಲ, ಎಂದರೆ ಯಾವುದೇ ವಸ್ತು ಅಥವಾ ಧಾನ್ಯಗಳಲ್ಲಿ ಇರುವ ಯಾವುದೇ ಗುಣ-ದೋಷಗಳು ಎಂದಿಗೂ ಯಥಾವತ್ತಾಗಿ ನಮಗೆ ಸಿಗುವುದಿಲ್ಲ. ವಿಶೇಷವಾಗಿ ಮಾನವ ಶರೀರದ ಪೋಷಣೆ ವಿಭಿನ್ನವಾಗಿದೆ. ಮೊದಲು ಮನಸ್ಸು ಏಕಾಗ್ರಗೊಳ್ಳದೇ ಯಾವುದೇ ವಿಷಯ ನಮ್ಮ ಮನಸ್ಸನ್ನೂ ಮತ್ತು ಯಾವುದೇ ಆಹಾರ ನಮ್ಮ ಶರೀರವನ್ನು ಸೇರದು.  ಏಕೆ ತಿನ್ನಬಾರದು?:  ತಂಗಳನ್ನವು ಮನಸ್ಸಿನ ತಮೋಗುಣವನ್ನು ಹೆಚ್ಚಿಸುತ್ತದೆ, ತಮೋಗುಣವು ಏನನ್ನೇ ಆಗಲಿ ಸ್ವೀಕರಿಸುವುದು ಅಸಾಧ್ಯ. ಪಾಠ ಕೇಳುವಾಗ ತಮೋಗುಣದ ಕಾರಣ ಅರೆನಿದ್ದೆಯಲ್ಲಿದ್ದರೆ ಅಥವಾ ತೂಕಡಿಕೆಯಲ್ಲಿದ್ದರೆ ಒಂದೇ ಒಂದು ಶಬ್ದವೂ ಮನೋಬುದ್ಧಿಯನ್ನು ಸೇರುವುದಿಲ್ಲ.  ಹಾಗೆಯೇ, ರಜೋಗುಣ ವರ್ಧನೆ ಆಗಿ ಮನಸ್ಸು ಚಂಚಲವಾಗಿ ಎಲ್ಲೆಲ್ಲೋ ಸುತ್ತುತ್ತಾ ಇದ್ದರೆ, ನಿದ್ದೆ ಮಾಡದಿದ್ದರೂ ಪಾಠ ಮನಕ್ಕೆ ಇಳಿದಿರುವುದಿಲ್ಲ  ಕೆಲವು ತಂಗಳು ಆಹಾರಗಳು 'ತಮಸ್ಸನ್ನು ವರ್ಧಿಸುವವು' ಉದಾ: ತಂಗಳು ಅನ್ನ  ಕೆಲವು ತಂಗಳು ಆಹಾರಗಳು 'ರಜೋಗುಣವನ್ನು ವರ್ಧಿಸುತ್ತವೆ' ಉದಾ: ದೋಸೆ, ಇಡ್ಲಿ  ಇನ್ನೊಂದು ವಿಷಯ ಎಂದರೆ -- ತಂಗಳನ್ನದಿಂದ ಮಾತ್ರ ಅಪ್ರಯೋಜನ ಎಂದು ಭಾವಿಸಬಾರದು. ಬೇರೆ ಸಮಯದಲ್ಲಿಯೂ ಸೇವಿಸಿದ ಅತ್ಯಂತ ಗುಣವಾನ್ ಆಹಾರದ ಸೂಕ್ಷ್ಮಗುಣಗಳನ್ನೂ ಸಹ ದೇಹ ಹೀರದೇ ನಮಗೆ ಅತ್ಯಂತ ಹಾನಿಯನ್ನು ತರುತ್ತದೆ.  ಗಮನಿಸಿ ನೋಡಿ -- ತಂಗಳು ತಿನ್ನುವವರ ಮನಸ್ಸು ಸಣ್ಣ ಸಣ್ಣ ವಿಷಯಕ್ಕೆ ಭಯ ಅಥವಾ ಕಿರಿಕಿರಿಗೊಳ್ಳುತ್ತದೆ. ಕೆಲವರಿಗೆ ಅಪಸ್ಮಾರ ರೋಗವನ್ನೂ ತರುತ್ತದೆ...   ಹಾಗಾಗಿ, ತಂಗಳನ್ನು ರಾಸಾಯನಿಕ ದೃಷ್ಟಿಯಿಂದ ನೋಡಬಾರದು...     ಧನ್ಯವಾದಗಳು••••••••••••••••••••••••••••••••••••••

More details

Published - Tue, 03 Oct 2023

Don't set alarm for wakeup morning  Set alarm to sleep at night

Created by - Dr Mallikarjun Dambal

Don't set alarm for wakeup morning Set alarm to sleep at night

•••••••••••••••••••••••••••••••••••••••  ಅಲಾರಾಮ್ ಇಟ್ಟು ಏಳುವುದಲ್ಲ; ಮಲಗುವುದು ಆರೋಗ್ಯಕರ....!!!  ಅಚ್ಚರಿಯೇ? ಆದರೆ, ಇದೊಂದು ಆಯುರ್ ವೈದ್ಯಕೀಯ ಸತ್ಯ ಮಾಹಿತಿ.  1) ನಮ್ಮನ್ನು ಎಚ್ಚರಿಸಲು ಇರುವ ಸಾಧನವೇ ಅಲಾರಾಮ್, ಆದರೆ ಅದು ನಿದ್ದೆಯಿಂದ ಎಚ್ಚರಿಸಲು ಎಂದಿಗೂ ಅಲ್ಲ....!  2) ಅಪೂರ್ಣ ನಿದ್ದೆಯಿಂದ ಎಚ್ಚರಿಸಲು ಅಲಾರಾಮ್ ಬಳಸಿದರೆ, ಮೆದುಳಿಗೆ ಶಾಕ್ ಆಗುತ್ತದೆ, ಮೆದುಳಿನ ಅನೇಕ ನರಗಳು ಶಾಶ್ವತವಾಗಿ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ...  3) ಬೇಗ ಏಳುವುದು ಖಂಡಿತಾ ಆರೋಗ್ಯಕರ, ಆದರೆ ನೆನಪಿಡಿ, ಅಪೂರ್ಣ ನಿದ್ದೆಯಿಂದ ಏಳುವುದು ಮಹಾ ಹಾನಿಕರ.  4) ಪೂರ್ಣ ನಿದ್ದೆ ಆದ ವ್ಯಕ್ತಿಯನ್ನು ಎಚ್ಚರಿಸಲು ಅಲಾರಾಮ್ ಬೇಕಿಲ್ಲ, ಅದೊಂದು ಸಹಜ ಪ್ರಕ್ರಿಯೆ.  5) ನಿದ್ದೆಯ ಸಮಯವನ್ನು ಮೀರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮನ್ನು, ನಿದ್ದೆಗೆ ಸಮಯವಾಯ್ತು ಎಂದು ಎಚ್ಚರಿಸಲು ಅಲಾರಾಮ್ ಬಳಸಿ, ಮಲಗುವ ವ್ಯವಸ್ಥೆ ಮಾಡಿಕೊಳ್ಳಿ  6) ಬೇಗ ಏಳಬೇಕೆಂದರೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ಬೇಗ ಮಲಗುವುದು, ಅಲ್ಲವೇ?  7) ಅಲಾರಾಮ್ ಘಂಟೆಯ ಧ್ವನಿಯಿಂದ ಶಾಕ್ ಆದ ಮೆದುಳಿನ ಆಯಾಸ ಓದಲು ಸಮರ್ಥವಲ್ಲ, ಆದ್ದರಿಂದ ನೀವು ಎಚ್ಚರಗೊಳಿಸಿದರೂ ಆಗ ಮಕ್ಕಳು ತೂಕಡಿಸುತ್ತವೆಯೇ ಹೊರತೂ ವಿಷಯಗ್ರಹಣೆ ಮಾಡಲಾರವು...  8) ಬ್ರಾಹ್ಮಿ ಮುಹೂರ್ತವು ಆ ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲು ಅತ್ಯಂತ ಶ್ರೇಯಸ್ಕರ. ಕೆಲಸ ಮಾಡಲು ಅಲ್ಲ.  9) ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಂಡರೂ ಸಹ, ಜೀರ್ಣಾಜೀರ್ಣದ ಕಡೆ ಗಮನಕೊಟ್ಟು, ಏಳಬೇಕೇ?ಅಥವಾ ಇನ್ನೂ ಮಲಗಬೇಕೇ? ಎಂದು ನಿರ್ಧರಿಸಬೇಕು.  10) ಸಹಜವಾಗಿ ಎಚ್ಚರಗೊಂಡರೂ ಸಹ ಹಿಂದಿನ‌ ರಾತ್ರಿಯ ಆಹಾರ ಜೀರ್ಣವಾಗಿದ್ದರೆ ಎದ್ದುಬಿಡಿ. ಜೀರ್ಣವಾಗಿಲ್ಲ ಎನಿಸಿದರೆ, ಬಲವಂತದಿಂದ ಎದ್ದು ಕೆಲಸ ಆರಂಭಿಸುವ ಬದಲು ನಿದ್ದೆಯನ್ನು ಪೂರ್ಣಗೊಳಿಸಿ.  ಆಹಾರ ಜೀರ್ಣಗೊಂಡರೆ, ಮಲಪ್ರವೃತ್ತಿ ಸಹಜವಾಗಿ ಆಗುತ್ತದೆ, ಸಹಜ ಮಲಪ್ರವೃತ್ತಿ ಹಸಿವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಹಸಿವಿನ ಅಗ್ನಿ ಆಹಾರವನ್ನು ಪಚಿಸುತ್ತದೆ, ಶರೀರಕ್ಕೆ ಬಲ ತರುತ್ತದೆ ಮತ್ತು ರೋಗಗಳನ್ನು ಭಸ್ಮ ಮಾಡುತ್ತದೆ. ಆದ್ದರಿಂದ ನಿನ್ನೆಯ ಆಹಾರ ಜೀರ್ಣವಾಗುವುದು ಅತ್ಯಂತ ಮುಖ್ಯ, ಅದು ಸಂಪೂರ್ಣ ನಿದ್ದೆಯಿಂದ ಮಾತ್ರ ಸಾಧ್ಯ!ಧನ್ಯವಾದಗಳು •••••••••••••••••••••••••••••••••••••••

More details

Published - Tue, 03 Oct 2023

Why Ayurveda gives importance to food

Created by - Dr Mallikarjun Dambal

Why Ayurveda gives importance to food

•••••••••••••••••••••••••••••••••••••••  ಆಹಾರದ ಜೊತೆಗಿನ ನೈಸರ್ಗಿಕ ಸಂಬಂಧ ಮತ್ತು ಅದಕ್ಕೆ ಕೊಡುವ ಗೌರವ ಎಂದರೆ ನಿಯಮಗಳು, ಇವುಗಳ ಜೊತೆಗಿನ ಪಯಣವೇ ಆರೋಗ್ಯ.  "ಆಹಾರ ಒಂದು ನಿರ್ಜೀವ ವಸ್ತುವಲ್ಲ, ಅದು ನಮ್ಮ ಅವ್ಯಕ್ತ ಶರೀರ!!"  ಈ ಶರೀರ ನಿತ್ಯವೂ ಸರಿಯಾಗಿ ನಡೆಯಲು ನಿರ್ದಿಷ್ಟ ನಿಯಮಗಳಿವೆ --  ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ,  ನಾಲಿಗೆಯಿಂದ ಮಾತ್ರ ರುಚಿ ಸಾಧ್ಯ,  ಕೈಯಿಂದ ಕೆಲಸ ಸಾಧ್ಯ,  ಕಾಲಿನಿಂದ ನಡಿಗೆ ಸಾಧ್ಯ...  ಹಾಗೆಯೇ, ಆಹಾರಕ್ಕೂ ನಿರ್ದಿಷ್ಟ ನಿಯಮಗಳಿವೆ, ಆಹಾರದ ಈ ರೀತಿಯ ತಯಾರಿಕೆ ಮಾತ್ರ ನಮಗೆ ಇಂತಹ ಅನುಕೂಲವನ್ನು ಸೃಷ್ಟಿಸುತ್ತದೆ, ಇಲ್ಲದಿದ್ದರೆ ಸಹಜ ಚಲನೆಗೆ ಅನಾನುಕೂಲ ಮಾಡುತ್ತದೆ, ಅದೇ ಅನಾರೋಗ್ಯ ಅಥವಾ ವ್ಯಾಧಿ.•••••••••••••••••••••••••••••••••••••••  ಮಾನವನ‌ ವ್ಯಾಧಿಗಳಲ್ಲಿ ಹೆಚ್ಚಿನವು, ಅಪಘಾತಗಳನ್ನು ಹೊರತುಪಡಿಸಿ ಶರೀರದೊಳಗೆ ಆದ ವ್ಯತ್ಯಾಸದಿಂದ ಆದಂತಹುಗಳು. ಇದಕ್ಕೆ ಕಾರಣ, ನಮ್ಮ ಆಹಾರದ ಆಯ್ಕೆ ಮತ್ತು ತಯಾರಿಕಾ ನಿಯಮಗಳ ವ್ಯತ್ಯಾಸ.  ವ್ಯಾಧಿಗಳಿಗೆ ಆಹಾರದ ಅನಿಯಮಗಳು ಕಾರಣ ಎಂದಾದರೆ, "ಕಾರಣ ತ್ಯಾಗ ಮಾಡಬೇಕಲ್ಲವೇ?" ನಿತ್ಯವೂ ತೊಂದರೆ ಕೊಡುವ ಯಾವುದನ್ನೇ ಆದರೂ ನಾವು ರಿಪೇರಿ ಅಥವಾ ರೀಪ್ಲೇಸ್ ಮಾಡುತ್ತೇವೆ ಅಲ್ಲವೇ? ಹಾಗೆಯೇ, ಸಹಜ ಜೀವನಕ್ಕೆ ಅಡ್ಡಿಪಡಿಸುವ ಈ ಆಹಾರ ಅನಿಯಮಗಳನ್ನು ತ್ಯಜಿಸುವುದೇ ರಿಪೇರಿ‌ ಎಂದಾಗುತ್ತದೆ, ಇದನ್ನೇ ಆಚಾರ್ಯರು, "ನಿದಾನ ಪರಿಮಾರ್ಜನಮೇವ ಚಿಕಿತ್ಸಾ" ಎಂದಿದ್ದಾರೆ.  ಅಂದರೆ, "ಚಿಕಿತ್ಸೆ ಎಂದರೆ ಕಾರಣಗಳ ತ್ಯಾಗ" ಎಂದರ್ಥ. ಏಕೆ ತ್ಯಾಗ ಮಾಡಲೇಬೇಕು? ಎಂದರೆ ತ್ಯಾಗ ಮಾಡದಿದ್ದರೆ ಅದೇ ಹಂತದಲ್ಲಿ ಇರುತ್ತೇವೆ. ಮಗು ಹತ್ತನೇ ತರಗತಿಯನ್ನು ತ್ಯಾಗ ಮಾಡಿದ್ದರೆ, ಹನ್ನೊಂದಕ್ಕೆ ವರ್ಗ, ಇಲ್ಲದಿದ್ದರೆ ಅಲ್ಲೇ ಇರುತ್ತದೆ ಅಥವಾ ಶಿಕ್ಷಣದಿಂದಲೇ ಹೊರಬರುತ್ತದೆ.  ಹಾಗೆಯೇ, ರೋಗದ‌ ಕಾರಣವಾದ ಆಹಾರ ತ್ಯಾಗ ಅಥವಾ ತಪ್ಪು ತಯಾರಿಕಾ ವಿಧಾನ ತ್ಯಾಗ ಮಾಡದಿದ್ದರೆ, ರೋಗದಲ್ಲೇ ಉಳಿಯುತ್ತೇವೆ ಅಥವಾ ಶರೀರದಿಂದಲೇ ಹೊರಹೋಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮರಣದೆಡೆಗೆ ಸಾಗುತ್ತೇವೆ.  ಹೀಗಾಗಿ, ಆಯುರ್ವೇದ ವೈದ್ಯ ತನ್ನೆಲ್ಲಾ ಶ್ರಮವನ್ನು ಕಾರಣ ಹುಡುಕುವುದರ ಕಡೆಗೇ ಹಾಕುತ್ತಾನೆ. ಶತಾಯಗತಾಯ ರೋಗಿಯಿಂದ ಅದನ್ನು ಬಿಡಿಸಲು ಪ್ರಯತ್ನಿಸುತ್ತಾನೆ.  ಅಂತವನು ಮಾತ್ರ ನಿಜವಾದ ವೈದ್ಯನಲ್ಲವೇ?•••••••••••••••••••••••••••••••••••••••  ನೀವು ಗಮನಿಸಲೇಬೇಕಾದ ಅಂಶ ಎಂದರೆ, ಯಾವಾಗಲೂ ಔಷಧ ಆರೋಗ್ಯ ಕೊಡುತ್ತದೆ ಎಂಬ "ಸುಳ್ಳ"ನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ಆಯುರ್ವೇದ ಎಂದರೆ ಪಥ್ಯ ಎಂದು ಮೂಗು ಮುರಿಯದಿರುವುದು.  ಎರಡು ವಿಷಯಗಳನ್ನು ನೆನಪಿಡಿ -- • ಇದು ಪಥ್ಯವಲ್ಲ, ಈಗಾಗಲೇ ಕೆಟ್ಟಿರುವ ಮತ್ತು ಹೆಚ್ಚಿನ‌ ಜನ‌ ಅದನ್ನು "ಮಾಮೂಲಿ ಆಹಾರ" ಎಂದು ಸೇವಿಸುತ್ತಿರುವ ಆಹಾರದ ಬಗ್ಗೆ ನೈಜ ತಿಳಿವಳಿಕೆಯನ್ನು ಪಡೆಯಿರಿ. ಮತ್ತು• ಆರೋಗ್ಯಕ್ಕಾಗಿ ಇವುಗಳ ಪಾಲನೆ ಅನಿವಾರ್ಯ, ಇದಕ್ಕೆ ಯಾವುದೇ ಅಡ್ಡ ಅಥವಾ ಹತ್ತಿರದ ಮಾರ್ಗಗಳಿಲ್ಲ.•••••••••••••••••••••••••••••••••••••••   ಧನ್ಯವಾದಗಳು   

More details

Published - Tue, 03 Oct 2023

Search
Popular categories
Latest blogs

Tue, 03 Oct 2023

All blogs