Published - Tue, 03 Oct 2023
ನಿಮ್ಮ ಆಮ್ಲಪಿತ್ತವನ್ನು ಇಲ್ಲವಾಗಿಸಿಕೊಳ್ಳಿ ಸಾಕು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಮೆಟಬಾಲಿಕ್ ರೋಗಗಳು ಸೂರ್ಯನೆದುರಿನ ಮಂಜಿನಂತೆ ಕರಗಿಹೋಗುತ್ತವೆ!
ಬೆಳೆವ ಮಕ್ಕಳಲ್ಲಿಯೂ, ದೃಢವಾಗಿ ಇರಬೇಕಾದ ಹದಿಹರೆಯದವರಲ್ಲೂ ಸಹ ದೊಡ್ಡ ದೊಡ್ಡ ರೋಗಗಳು ಪತ್ತೆಯಾಗುತ್ತಿವೆ. ಅದರಲ್ಲೂ -- ಯಕೃತ್ ತೊಂದರೆ, ಕಿಡ್ನಿ ತೊಂದರೆ, ಹೃದ್ರೋಗ, ಕ್ಯಾನ್ಸರ್, ನರರೋಗ, ಮಾನಸಿಕ ವಿಕಾರ, ಅಲರ್ಜಿ, ಅಸ್ತಮಾ
.
.
.
ಮುಂತಾದವುಗಳು...
ಇವೆಲ್ಲಾ ತುಂಬಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ, ಇದಕ್ಕೆಲ್ಲಾ ಒಂದೇ ಕಾರಣ ದೇಹ ಹುಳಿಗಟ್ಟುವಿಕೆ.
ಏನಾಗುತ್ತಿದೆ?
ಕೃತಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ನಮ್ಮ ಎಲ್ಲಾ ಆಹಾರಗಳೂ ಹುಳಿಮಯವಾಗಿವೆ. ಏನು ತಿಂದರೂ ಗ್ಯಾಸ್ಟ್ರಿಕ್ ಸಾಮಾನ್ಯ ಎನಿಸಿಬಿಟ್ಟಿದೆ...
ಈ ಗ್ಯಾಸ್ಟ್ರಿಕ್ ಎಂದು ಕರೆಸಿಕೊಳ್ಳುವ 'ಆ್ಯಸಿಡ್ ಪೆಪ್ಟಿಕ್ ಕಾಯಿಲೆ'ಯು ಮೇಲೆ ತಿಳಿಸಿದ ಎಲ್ಲಾ ಕಾಯಿಲೆಗಳನ್ನು ಉಂಟುಮಾಡುವ ಮತ್ತು ಪೋಷಿಸಿ ಬೆಳೆಸುವ ವಿಕೃತ ರಸವನ್ನು ತಯಾರಿಸಿ ನಿರಂತರ ಸರಬರಾಜು ಮಾಡುತ್ತದೆ. ಇನ್ನು ಕಾಯಿಲೆಗಳು ಬರದಿರಲು ಸಾಧ್ಯವೇ?!!
ಉದ್ದು ಹಾಕಿ, ಅಕ್ಕಿ ರುಬ್ಬಿ ಇಡುವ ಹಿಟ್ಟಿನಲ್ಲಿ ಚೆನ್ನಾಗಿ ಹುಳಿಬರುತ್ತದೆ ಅಲ್ಲವೇ? ಎಲ್ಲಿಂದ ಬಂತು ಆ ಹುಳಿತನ? ಅದು ಕೊಟ್ಯಾಂತರ ಬ್ಯಾಕ್ಟೀರಿಯಾಗಳ ತೀವ್ರ ಮತ್ತು ಶೀಘ್ರ ಚಟುವಟಿಕೆಯಿಂದ ಅಲ್ಲವೇ? ಅದೇ ರೀತಿಯ ರಸವಿಶೇಷದಿಂದ ಶರೀರದೊಳಗೆ ವಿಪರೀತ ಹುಳಿ ಅಂಶ ಉಂಟಾಗುತ್ತಿರುವ ಕಾರಣ, ನಮ್ಮ ರೋಗನಿರೋಧಕ ಶಕ್ತಿಯನ್ನು ಮೀರಿ ತೀವ್ರವಾಗಿ ಅಸಂಖ್ಯ ಕೋಟಿ ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ. ಈ ಕಾರಣದಿಂದ ಶಕ್ತಿ ಕುಂದಿದ ಜೀವಕೋಶಗಳ ಪ್ರತಿಕ್ರಿಯೆ ನಮ್ಮ ಇಂದಿನ ಮಹಾನ್ ರೋಗಗಳು...
ಶುಕ್ತಪಾಕ ಎಂದು ಕರೆಸಿಕೊಳ್ಳುವ ಈ ಅವಸ್ಥೆ ಕಡಿಮೆ ಆಗದೇ ಹೋದರೆ ರೋಗೋಲ್ಬಣತೆಯಿಂದ ಜಗದ ಜನ ತತ್ತರಿಸುವುದನ್ನು ತಪ್ಪಿಸಲು ಯಾವ ಆ್ಯಂಟಿಬಯೋಟಿಕ್, ಸಕ್ಕರೆ ನಿಯಂತ್ರಕ, ಬಿ.ಪಿ. ನಿಯಂತ್ರಿಸುವ ವಿವಿಧ ಅವೈಜ್ಞಾನಿಕ ಪ್ರಚೋದಕ ವಿಧಾನಗಳು, ಅಲರ್ಜಿ ಅದುಮಿಡುವ ವಿಧಾನಗಳು, ಡಯಾಲೈಸಿಸ್‌ಗಳೂ, ಕಿಮೋಥೆರಪಿಗಳೂ, ರೇಡಿಯೋಥೆರಪಿಗಳಿಗೂ ಅಸಾಧ್ಯ...
ನಾವು ಕಾಯಿಲೆಗಳೊಂದಿಗೆ ಗುರುತಿಸಿಕೊಂಡು ಆಸ್ಪತ್ರೆಗೆ ಹೋದರೆ ಸಿಗುವುದು ಮಾತ್ರೆಗಳು, ಆರೋಗ್ಯ ಅಲ್ಲ!
ಎಷ್ಟೇ ಕ್ಯಾಲ್ಸಿಯಂ ಮಾತ್ರೆ ಸೇವಿಸಿದರೂ ನಿಲ್ಲದ ನಿರಂತರ ಮೂಳೆ ಸವೆತ...
ಎಷ್ಟೇ ಮಧುಮೇಹ ನಿಯಂತ್ರಕ ಮಾತ್ರೆ ಸೇವಿಸಿದರೂ ಇನ್ಸುಲಿನ್ ಹಂತ, ಡಯಾಲೈಸಿಸ್ ಹಂತ, ಹೃದ್ರೋಗದ ಹಂತ ತಲುಪಿಸುವ ಮಧುಮೇಹ...
ಎಷ್ಟೇ ಥೈರಾಯ್ಡ್ ಮಾತ್ರೆ ಸೇವಿಸಿದರೂ ಹೆಚ್ಚುವ ತೂಕ, ಮುಟ್ಟಿನ ತೊಂದರೆ, ಕಡಿಮೆಯಾಗದ TSH ಅಂಶ...
ಎಷ್ಟೇ ಗ್ಯಾಸ್ಟ್ರಿಕ್ ಮಾತ್ರೆ ಸೇವಿಸಿದರೂ ನಿಲ್ಲದ ಆಮ್ಲಪಿತ್ತ...
ಹೀಗೆ ಹೇಳುತ್ತಾ ಹೋದರೆ, ಆಸ್ಪತ್ರೆಯಿಂದ ಸಿಗುವುದು ಮಾತ್ರೆಗಳು ಮಾತ್ರ, ಆರೋಗ್ಯವಂತೂ ಖಂಡಿತಾ ಅಲ್ಲ...
ಅದರೊಂದಿಗೆ ಸಿಗುವ ಮಹಾ ದೌರ್ಭಾಗ್ಯ ಎಂದರೆ 'ಶ್ರಮವಹಿಸಿ ದುಡಿದ ಗಳಿಕೆ ತೀವ್ರ ವೇಗದಲ್ಲಿ ಇಳಿದು ಸಾಲದ ಹಂತಕ್ಕೆ ತಳ್ಳಿಬಿಡುವ ಅಪಾಯ'
ಕೊನೆಗೆ, ಸಾಲದಲ್ಲೇ ಕೊನೆಗಾಣುವ ಜೀವ ಆರೋಗ್ಯವನ್ನು ಪಡೆಯುವುದೇ ಇಲ್ಲ!!!
ವ್ಹಾವ್ ಕೇವಲ ಔಷಧ ಕೊಡುವ ವೈದ್ಯಕೀಯ ಪದ್ಧತಿಯೇ? ನೀನೊಂದು ಪ್ರತಿಮನೆಯ ಅಜ್ಞಾತ ಶತ್ರು
••••••••••••••••••••••••••••••••••••••
ಅತ್ಯಂತ ಸರಳ 5 ಪರಿಹಾರಗಳು:
1. ಸಾವಯವ ಧಾನ್ಯಗಳಿಗೆ ಮರಳಿ ಬನ್ನಿ, ಇದು ಅನಿವಾರ್ಯ.
2. ಕಡ್ಡಾಯವಾಗಿ ಹಸಿದಷ್ಟೇ ಆಹಾರ ಸೇವಿಸಿ, ತಕ್ಕಷ್ಟೇ ಶಾರೀರಿಕ ಶ್ರಮವನ್ನು ಪ್ರತಿದಿನ ತಪ್ಪದೇ ಮಾಡಿ.
3. ಸಕಾಲದಲ್ಲಿ ತಾಜಾ, ಮೃದು ಆಹಾರ ಮಾತ್ರ ಸೇವಿಸಿ, ಅಕಾಲ ಭೋಜನ ಮಾಡದಿರಿ.
4. ಮಲ, ಮೂತ್ರಾದಿ ಶಾರೀರಿಕ ಸೂಚನೆಗಳನ್ನು ತಪ್ಪದೇ ಪಾಲಿಸಿ.
5. ಧನಾತ್ಮಕ ಫಲಿತಾಂಶ ಕೊಡದ ಅನಗತ್ಯ ಚಿಂತೆಗಳಿಂದ ದೂರ ಇದ್ದು, ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.
ಕೃತ್ರಿಮ ಆಹಾರ, ಜೀವನಶೈಲಿಗಳಿಂದ ದೂರದ ಹಾದಿ ಕ್ರಮಿಸಿದ ಮೇಲೆ ಸಹಜತೆಯು ಕಷ್ಟ ಎನಿಸುತ್ತದೆ, ಆದರೆ ನೀವೂ, ನಿಮ್ಮ ಸಂತಾನ ಆರೋಗ್ಯದಿಂದ ಇರಲು, ಕುಲ ಮುಂದುವರಿಯಲು ಇದು ಅನಿವಾರ್ಯ...
...........
ಏನು ತಿಂದರೆ ಏನು ಸಿಗುತ್ತದೆ ಎಂಬುದು ಅಪ್ರಾಕೃತಿಕ ಕೇವಲ ಲೆಕ್ಕಾಚಾರ, ಏನನ್ನು ಜೀರ್ಣಿಸಿಕೊಂಡರೆ ಏನು ಸಿಗುತ್ತದೆ ಎಂಬುದು ಮಾತ್ರ ಸತ್ಯ!
ಆಹಾರ ವಿಹಾರ ಸರಿಪಡಿಸಿಕೊಳ್ಳೋಣ, ಆರೋಗ್ಯದಿಂದ ಇರೋಣ...
••••••••••••••••••••••••••••••••••••••
ಆಯುರ್ವೇದ ವಿಷಯಗಳ ಆಳವಾದ ಮಾಹಿತಿ ಬೇಕಾದಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿರುವ 'ಆಸ್ಪತ್ರೆ ರಹಿತ ಜೀವನ' ಗುಂಪಿಗೆ ಸೇರಿದರೆ ಆರೋಗ್ಯ ಸಂರಕ್ಷಕ ಮಾಹಿತಿಗಳ ಸುಮಾರು 700+ ಸಂಚಿಕೆಗಳಿರುವುದನ್ನು ಗಮನಿಸಬಹುದು.
Tue, 03 Oct 2023
Tue, 03 Oct 2023
Tue, 03 Oct 2023
Write a public review