Published - Tue, 03 Oct 2023
ಅಮೃತಾತ್ಮರೇ, ನಮಸ್ಕಾರ
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ, ಸಂಚಿಕೆ-648
•••••••••••••••••••••••••••••••••••••••
ಮೊದಲ ಸೂಚನೆ:
ಇವರಿಗೆ ಸಾಮಾನ್ಯ ಮಧುಮೇಹಿಗಳಂತೆ ಚಿಕಿತ್ಸೆ ಮತ್ತು ಉಪಚಾರಗಳನ್ನು ಮಾಡಬಾರದು...
•••••••••••••••••••••••••••••••••••••••
ಜನ್ಮಾರಭ್ಯ ಬರುವ ಮಧುಮೇಹಕ್ಕೆ ಮೇದಸ್ಸಿನ ವೃದ್ಧಿ(ಸ್ನಿಗ್ಧಾಂಶ, ಕ್ಲೇದ, ಸಕ್ಕರೆ ಅಂಶ) ಕಾರಣವಲ್ಲ. ಬದಲಾಗಿ ಮೇದಧಾತುವಿನ ಕ್ಷಯ ಕಾರಣವಾಗಿದೆ. ಶೇ.5 ರಷ್ಟು ಮಕ್ಕಳಿಗೆ ಇನ್ಸುಲಿನ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೇಕಾಗಬಹುದು, ಉಳಿದವರಿಗೆ ಅಲ್ಲ.
ಚಿಕಿತ್ಸೆ ಅತ್ಯಂತ ನಿರ್ದಿಷ್ಟವಾಗಿ ಪ್ರತಿ ಮಗುವಿಗೆ ಭಿನ್ನವಾಗಿ ಇರಬೇಕು, ಪ್ರತಿ ತಿಂಗಳೂ ವಿಭಿನ್ನ ಪ್ರಮಾಣದ ಔಷಧಿ ಉಪಚಾರಗಳು ಬೇಕಾಗಬಹುದು. ಇಲ್ಲಿ ಯಶಸ್ಸಿಗೆ ಬಹಳ ಅಡ್ಡಿಗಳು ಬರುತ್ತವೆ, ಅಜೀರ್ಣ ಎಂಬುದು ಅದರಲ್ಲಿ ಬಹು ದೊಡ್ಡ ಅಡ್ಡಿ.
ಸೂಕ್ಷ್ಮದೃಷ್ಟಿಯ ವೈದ್ಯ ಮಾತ್ರ ಆಗಾಗ ನಿರ್ವಹಿಸಬಲ್ಲ.
ಶೇ.60 ಕ್ಕಿಂತಲೂ ಹೆಚ್ಚು ಬಲ ಬಂದಮೇಲೆ, ಚಿಕಿತ್ಸೆ ಸರಳವಾಗುತ್ತಾ ಸಾಗುತ್ತದೆ. ಏಕೆಂದರೆ ಒಮ್ಮೆ ಸಾರ ಅಥವಾ ಸಶಕ್ತ ಮೇದಸ್ಸು ತನ್ನ ಸ್ಥಾನದಲ್ಲಿ ನೆಲೆಯೂರಿದರೆ ಇನ್ನು ಬೇಗ ಬೇಗ ತನ್ನನ್ನು ತಾನೇ ನಿವ೯ಹಿಸಿಕೊಳ್ಳುತ್ತದೆ, ಅಲ್ಲಿಯವರೆಗೆ ಹೋರಾಟ ಇದ್ದದ್ದೇ.
ಇದು ಹೇಗೆ ಎಂದರೆ, ಬೆಳೆವ ಮಗುವನ್ನು ತಾಯಿ ಪೋಷಣೆ ಮಾಡಿದರೆ, ಸದೃಢವಾದ ಮಗು ಅದೇ ತಾಯಿಯನ್ನು ತಾನು ಪೋಷಣೆ ಮಾಡಿದಂತೆ!
ಈ ಸಿದ್ಧಾಂತಗಳು, ಚಿಕಿತ್ಸಾ ಸೂಕ್ಷ್ಮತೆಗಳನ್ನು ವೈದ್ಯರ ಪಾಲಿಗೆ ಬಿಟ್ಟು, ಜನಸಾಮಾನ್ಯರು ಹೇಗೆ ಸಹಕರಿಸಬೇಕೆಂಬುದನ್ನು ನೋಡೋಣ...
• ಆಯುರ್ವೇದ ವೈದ್ಯರು ಸೂಚಿಸುವ ಆಹಾರ ಕ್ರಮ ಮತ್ತು ಉಪಚಾರಗಳನ್ನು ಅಲೋಪತಿಯ ಜ್ಞಾನ, ಇಂಟರ್‌ನೆಟ್ ಮಾಹಿತಿ, ನಿಮ್ಮ ತಿಳಿವಳಿಕೆಯೊಂದಿಗೆ ತರ್ಕ ಮಾಡಿ, ಸ್ವಲ್ಪ ನಿಮ್ಮದು, ಸ್ವಲ್ಪ ವೈದ್ಯರ ಸಲಹೆ ಹೀಗೆ ಮಾಡದಿರಿ. ಇಲ್ಲಿ ಈ ತರ್ಕ ನಡೆಯದು, ಏಕೆಂದರೆ IDDM ನ ಬಗ್ಗೆ ಇದುವರೆಗೆ ಸಿಗುವ ಮಾಹಿತಿಗಳೆಲ್ಲಾ, ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ನಿಷ್ಕ್ರಿಯ ಆದ ಬಳಿಕದ ಮಾಹಿತಿ ಮತ್ತು ಉಪಚಾರಗಳು ಮಾತ್ರ. ಇಲ್ಲಿ ಮಾಡಲು ಹೊರಟಿರುವುದು ಆ ಪ್ಯಾಂಕ್ರಿಯಾಸ್ ಹೇಗೆ ಹಾಳಾಯ್ತು ಮತ್ತು ಅದನ್ನು ಮರುಪೂರಣ ಮಾಡುವ ಚಿಕಿತ್ಸೆ. ಒಂದಕ್ಕೊಂದು ತದ್ವಿರುದ್ಧವಾಗಿ ಕಾಣುತ್ತವೆ ಹಾಗಾಗಿ, ಪೂರ್ವಾಗ್ರಹ ಇಲ್ಲದೇ ವಿಚಾರವನ್ನು ತಿಳಿದುಕೊಳ್ಳಿ, ಆದರೆ, ಸಧ್ಯ ಇರುವ ಮೇಲ್ಮಟ್ಟದ ಮಾಹಿತಿಯ ಅನುಸಾರ ಉಪಚಾರ ಮಾಡುವ ಸಾಹಸವು ಚಿಕಿತ್ಸಾ ಸಾಫಲ್ಯವನ್ನು ಕೊಡುವುದಿಲ್ಲ.
• ಶೇ.60 ಕ್ಕಿಂತ ಹೆಚ್ಚು ಗುಣ ಆಗುವವರೆಗೆ ಸ್ವಲ್ಪವೂ ಸಿಹಿ ಪದಾರ್ಥಗಳನ್ನು ಕೊಡಬಾರದು, ಸಕ್ಕರೆ ಅಂಶ ಕಡಿಮೆ ಆದರೆ?! ಎಂಬ ಪ್ರಶ್ನೆ ಬಂದರೆ, ಆಯುರ್ವೇದ ಚಿಕಿತ್ಸೆ ಪ್ರಾರಂಭ ಆದ ದಿನದಿಂದ ಅಂತಹ ಅವಸ್ಥೆ ಎಂದಿಗೂ ಬಾರದು(ನೀವಾಗಿ ಅಪಥ್ಯ ಮಾಡದಿದ್ದರೆ ಮಾತ್ರ).
• ಅಗ್ನಿವರ್ಧಕವಾದ ಕಾರಣ ತುಪ್ಪವನ್ನು ಕೊಡಬೇಕಾಗುತ್ತದೆ, ಇಲ್ಲಿ ಔಷಧ ಸಿದ್ಧ ತುಪ್ಪಗಳನ್ನೇ ಪ್ರಧಾನವಾಗಿ ಬಳಸಬೇಕು. ಅಂಗಡಿಯಲ್ಲಿ ಸಿಗುವ ಪ್ಯಾಕ್ಡ್ ತುಪ್ಪಗಳು ಅಪಾಯಕರ.
• ಇನ್ಸುಲಿನ್ ಮೊದಲ ತಿಂಗಳಿನಿಂದಲೇ ಶೇ.10 ರಷ್ಟು ಕಡಿಮೆ ಮಾಡಲಾಗುತ್ತದೆ, ಒಂದೆರಡು ತಿಂಗಳಲ್ಲಿ ಶೇ.50 ರಷ್ಟು ಕಡಿಮೆ ಮಾಡಬಹುದು, ಎಲ್ಲವೂ ಕೇವಲ ಔಷಧಿಯ ಮೇಲೆ ಅವಲಂಬಿತವಲ್ಲ. ಆಹಾರ-ವಿಹಾರ ನಿಯಮ ಅತೀ ಮುಖ್ಯ.
• ತರ್ಕ ತಿಳಿಯದ ಪುಟ್ಟ ಮಗು, ಹೇಳಿದಂತೆ ಪಾಲಿಸುವ ಪೋಷಕರು ಇದ್ದರೆ ಚಿಕಿತ್ಸೆ ಸುಲಭ. ಮಗು ಬೌದ್ಧಿಕವಾಗಿ ಬೆಳೆದು, ಚಿಂತೆಗೆಡುವುದು, ರಾತ್ರಿ ನಿದ್ದೆಗೆಡುವುದು, ತನ್ನದೇ ಆಲೋಚನೆಯನ್ನು ಹೇರಲು ಪ್ರಾರಂಭಿಸಿಕೊಂಡರೆ, ವೈದ್ಯರು ಮತ್ತು ಪೋಷಕರು ಮಾಡುವ ಸರ್ವ ಪ್ರಯತ್ನವೂ ವ್ಯರ್ಥವಾಗಿ ಪರಿಣಮಿಸುತ್ತವೆ. ಅಂತವರಲ್ಲಿ ಇನ್ಸುಲಿನ್ ಕಡಿಮೆ ಮಾಡಬಹುದಷ್ಟೇ, ನಿಲ್ಲಿಸುವುದು ಅಸಾಧ್ಯ.
• ಇವರಲ್ಲಿ ಸಕ್ಕರೆ ಅಂಶ ತುಸು ಹೆಚ್ಚಾಗಿ ಇಟ್ಟುಕೊಳ್ಳುವುದು ಮುಖ್ಯ, ಏಕೆಂದರೆ ಅದು ನಿಧಾನವಾಗಿ ಶುದ್ಧ ಮೇದಸ್ಸನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಪೂರ್ಣ ಸಂಗ್ರಹವಾದ ನಂತರ ತಾನಾಗಿಯೇ ಸಹಜತೆಗೆ ಬರುತ್ತದೆ.
• ದಯಮಾಡಿ ಈ ಮಾಹಿತಿಯನ್ನು ಗಂಭಿರವಾಗಿ ಪರಿಗಣಿಸಿ - ಲ್ಯಾಬೋರೇಟರಿಗಳಲ್ಲಿ ಹೇಳಿರುವ ಸಕ್ಕರೆಯ ನಾರ್ಮಲ್ ಅಂಶ - ಅದು ನಮ್ಮ ಆರೋಗ್ಯವನ್ನು ಸರಿಮಾಡುವುದಕ್ಕಿಂತ ಕಾಣದ ಕೈಗಳ ವ್ಯಾಪಾರದ ಆಟವಾಗಿದೆ. ಅದರ ನಾರ್ಮಲ್ ಅಂಶವನ್ನು ಕಡಿಮೆ ಮಾಡಿದಷ್ಟೂ ವ್ಯಾಪಾರ ಜೋರು ಅಲ್ಲವೇ? ಹೇಗೆ ಇರಬೇಕೆಂದರೆ ನಿಮ್ಮ ಶರೀರ ಯಾವ ಲಕ್ಷಣವನ್ನೂ ತೋರುತ್ತಿಲ್ಲ ಎಂದರೆ ನಿಮ್ಮ RBS 200-250 ಇದ್ದರೂ ಅದು ನಾರ್ಮಲ್. ನೀವು ಆರೋಗ್ಯದಿಂದ ಇರುವುದು ಮುಖ್ಯವೇ ಹೊರತು, ನಿಮಗೆ ಕೊಡುವ ರಿಪೋರ್ಟ್ ಅಲ್ಲ!!
• ಮಗುವಿಗೆ ಸರಿಯಾದ ಸಮಯಕ್ಕೆ ನಿದ್ದೆಗೆ ಬಿಡಿ, ಚೆನ್ನಾಗಿ ನಿದ್ದೆ ಮಾಡಲಿ, ಆತಂಕವನ್ನು ಒಟ್ಟಾರೆ ಹಾಕಲೇಬೇಡಿ. ಮಗುವಿನ ಮೇದಸ್ಸು ತೆಳುವಾಗಿ, ಅಶಕ್ತವಾಗಿ ಇರುವ ಕಾರಣ ಒತ್ತಡ ಎನಿಸುವ ಚಟುವಟಿಕೆಗಳನ್ನು ಮಾಡಲು ಒತ್ತಾಯಿಸಬೇಡಿ, ವಿಶೇಷವಾಗಿ ಶಾಲಾ ಅಂಕಪಟ್ಟಿಯ ವರ್ಧನೆಗೆ ತೊಡಗಬೇಡಿ, ಮಾಹಿತಿಗಿಂತ ಸ್ಫೂರ್ತಿ ಮುಖ್ಯ.
• ತಾಯಂದಿರೇ, ಬೆಳಗಿನ ಉಪಾಹಾರದ ಬಗ್ಗೆ ವಿಶೇಷ ಗಮನ ಇರಲಿ. ಇಡೀ ಚಿಕಿತ್ಸಾ ಅವಧಿಯಲ್ಲಿ ಒಮ್ಮೆ ಕಲಸನ್ನಗಳು, ಫರ್ಮಂಟೆಡ್ ಆಹಾರಗಳಾದ ಮಾಮೂಲಿ ದೋಸೆಗಳನ್ನು ಕೊಟ್ಟರೂ ಅರ್ಧದಲ್ಲಿ ಕೈ ಕತ್ತರಿಸಿಕೊಂಡಂತೆಯೇ ಸರಿ. ನೀರುದೋಸೆ ಕೊಡಬಹುದು, ಅಕ್ಕಿ ಕಡುಬು ಕೊಡಬಹುದು, ತೆಳುವಾಗಿ, ಮೃದುವಾಗಿ ಇರುವ ಪಲಾವ್, ಗೋಧಿ ಉಪ್ಪಿಟ್ಟು ಕೊಡಬಹುದು.
• ಹಿಂದಿನ ದಿನದ ಆಹಾರಗಳು, ಪ್ಯಾಕ್ಡ್ ತಿಂಡಿಗಳು, ಬೇಕರಿ ಪದಾರ್ಥಗಳು ಸರ್ವದಾ ಬೇಡ
• ಹಗಲು ನಿದ್ದೆ, ರಾತ್ರಿ ಜಾಗರಣಗಳು ಅತ್ಯಂತ ನಿಷಿದ್ಧ.
•
•
•
ಹೀಗೆ, ಸೂಕ್ಷ್ಮತೆಯಿಂದ ಪಾಲಿಸಿ, ಒಮ್ಮೆ ಮೇದಸ್ಸು ಸ್ಥಿರವಾಗಲು ಬಿಡಿ, ನಂತರ ಸಾಮಾನ್ಯ ಜೀವನ ಮಾಡಬಹುದು...
•••••••••••••••••••••••••••••••••••••••
ಭಗವಂತನ ಶ್ರೀ ಕೃಪೆಯಿಂದ ಸರ್ವರಿಗೂ ಒಳಿತಾಗುತ್ತದೆ...
ಧನ್ಯವಾದಗಳು
Tue, 03 Oct 2023
Tue, 03 Oct 2023
Tue, 03 Oct 2023
Write a public review