Published - Tue, 03 Oct 2023
•••••••••••••••••••••••••••••••••••••••
ಮಧುಮೇಹ ಮರೆತರೆ ಮಹಾ ಅಪಾಯ
ಇದೇನು ವೈದ್ಯರು ಇದುವರೆಗೆ ಹೇಳಿದ ಹೇಳಿಕೆಗಳಿಗೆ ವಿರುದ್ಧವಾಗಿ ಬರೆದಿದ್ದಾರಲ್ಲ
ಆಹಾರ ಪಾಲನೆಯನ್ನೂ, ಜೀವನ ಶೈಲಿ ಪಾಲನೆಯನ್ನೂ ಮಾಡದೇ "ಆಸ್ಪತ್ರೆ ರಹಿತ ಜೀವನ ಮಾಹಿತಿಯನ್ನು ಕೇವಲ ಓದುವೆ ಪಾಲಿಸಲಾರೆ", ಅದರಿಂದಲೇ ಮಧುಮೇಹವನ್ನು ಗೆಲ್ಲುವೆ ಎಂದು ಉಪೇಕ್ಷಿಸುವ ನಿಲುವು ತಳೆದವರಿಗೆ ಇಂದಿನ ಸಂಚಿಕೆ ಮೀಸಲು...
•••••••••••••••••••••••••••••••••••••••
ಆತ್ಮೀಯರೇ,
ಅತ್ಯಂತ ನೋವಿನ ಸಂಗತಿ ಎಂದರೆ, ಆಸ್ಪತ್ರೆ ರಹಿತ ಜೀವನದ ಕೆಲ ಸೋಂಬೇರಿ ಸದಸ್ಯರು, ಮಧುಮೇಹ ಎಂಬುದು ಇಲ್ಲವೇ ಇಲ್ಲ, ಅದನ್ನು ಉಪೇಕ್ಷಿಸಬಹುದು, ಆಧುನಿಕ ವೈದ್ಯರು ಸುಮ್ಮನೇ ಹೆದರಿಸುತ್ತಿದ್ದಾರೆ, ನಾವು ಆಸ್ಪತ್ರೆ ರಹಿತ ಜೀವನ ಗುಂಪಿನಲ್ಲಿದ್ದೇವೆ, ಹಾಗಾಗಿ ನಮಗೆ ಏನೂ ಆಗದು. ಇಂತಹ ನಿರ್ಧಾರಕ್ಕೆ ಬಂದ ನನ್ನ ಆತ್ಮೀಯರೊಬ್ಬರಿಗೆ ಎಚ್ಚರಿಸುತ್ತಾ ಈ ಸಂಚಿಕೆ ಬರೆಯುವ ಯೋಚನೆ ಬಂದಿತು...
ಸತ್ಯ ಶೇ. 80 ರಷ್ಟು ಜನರ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಹುದು, ಶೇ. 50 ರಷ್ಟು ಜನರನ್ನು ಖಂಡಿತಾ ಔಷಧ ರಹಿತವಾಗಿ ಕೇವಲ ಆಹಾರ ಪಾಲನೆಯಿಂದಲೂ, ಶೇ. 30 ರಷ್ಟು ಔಷಧಗಳಿಂದ, ಬಹು ಬಿಗಿಯಾದ ಆಹಾರ ಪದ್ಧತಿಗಳ ಪಾಲನೆಯಿಂದ ಗುಣಪಡಿಸಬಹುದು...
ಇದರ ಅರ್ಥ ಆಹಾರ ನಿಯಮ ಪಾಲಿಸದೇ, ವ್ಯಾಯಾಮ ಮಾಡದೇ, ಬರೀ ಮಾಹಿತಿಯನ್ನು ಓದಿ, ಪಾಲಿಸದಿರುವವರೇ ಎಚ್ಚರ ನಿಮಗಾಗಿ ಹೇಳುವೆ -- ಮಧುಮೇಹ ಮರೆತರೆ ಮಹಾ ಅಪಾಯ!!
ಏಕೆಂದರೆ, ಮಧುಮೇಹ ಬರುವುದು "ಕ್ಲೇದ" ಎಂಬ ಕೊಬ್ಬಿನ ಅಂಶದಿಂದ, ಅದನ್ನು ವ್ಯಾಯಾಮದಿಂದ ಕರಗಿಸಬೇಕು ಮತ್ತು ಆಹಾರದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಈ ಕ್ಲೇದವು ನರಗಳನ್ನು ರಕ್ತನಾಳಗಳನ್ನು ಪೋಷಣೆ ಮಾಡಲು ಅಸಮರ್ಥತೆಯನ್ನು ಹೊಂದಿರುವ ಕಾರಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳ ವಿಕಾರವನ್ನು ಉಂಟು ಮಾಡಬಲ್ಲದು. ಹಾಗಾಗಿ, ಔಷಧಿ ಬೇಡ ಎಂದು ಹೇಳುತ್ತಿರುವೆವೇ ಹೊರತು ಬೇಕಾಬಿಟ್ಟಿ ಜೀವನ ಮಾಡುವುದನ್ನು "ಆಸ್ಪತ್ರೆ ರಹಿತ ಜೀವನ" ಮಾಲಿಕೆಗಳು ಅನುಮೋದಿಸುತ್ತಿಲ್ಲ.
ಮತ್ತು ಆಧುನಿಕ ಔಷಧಿಗಳು ತರುವ ಅಪಾಯವನ್ನು ತಿಳಿಸುವುದು, ರೋಗರಹಿತವಾಗಿದ್ದರೆ ಮಾತ್ರ ಆನಂದಮಯ ಜೀವನವನ್ನು ಮಾಡಲು ಸಾಧ್ಯ ಎಂದು ಹೇಳುವುದೇ ಈ ಗುಂಪಿನ ಮೂಲೋದ್ದೇಶ...
ಆಹಾರ ಪಾಲನೆ ಅಸಾಧ್ಯ ಎನುವವರು ಅತಂತ್ರಕ್ಕೆ ಒಳಗಾಗುವುದು ಬೇಡ. ಸಧ್ಯಕ್ಕೆ ನಿಮ್ಮಲ್ಲಿ ಇರುವ ಔಷಧಿಗಳನ್ನೇ ಸೇವಿಸಿ, ನಿಮ್ಮದಿಯಿಂದ ಇರಿ...
ಕೇವಲ ಪುಸ್ತಕ ಓದಿದರೆ ಆರೋಗ್ಯ ಲಭಿಸದು...
Tue, 03 Oct 2023
Tue, 03 Oct 2023
Tue, 03 Oct 2023
Write a public review